ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸುವಂತೆ ದಯಾನಂದ ಸ್ವಾಮೀಜಿ ಒತ್ತಾಯ
- shivaraj bandigi
- 14 Jan 2024 , 8:37 PM
- Belagavi
- 486
ಬೆಳಗಾವಿ :

ಅಥಣಿ ತಾಲೂಕಿನ ಯಲ್ಲಮ್ಮನ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ಮಾಡುವುದನ್ನು ಜಿಲ್ಲಾಡಳಿತ ನಿಷೇಧ ಮಾಡಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣಿ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇವಲ ಅಥಣಿ ತಾಲೂಕಿನ ಯಲಮ್ಮನ ಜಾತ್ರೆಯಲ್ಲಿ ಮಾತ್ರ ಪ್ರಾಣಿ ಬಲಿ ನಿಷೇಧ ಮಾಡುವುದಲ್ಲ. ರಾಜ್ಯದ ಎಲ್ಲ ಕಡೆಗಳಲ್ಲಿ ಜಾತ್ರಾ ಪರಿಸರ, ಮರವಣಿಗೆಯಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾರೂ ಪ್ರಾಣಿಗಳನ್ನು ಬಲಿ ಕೊಡುವುದನ್ನು ಸರಕಾರ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.
ಶರಣಪ್ಪ ಕಮ್ಮಾರ ಉಪಸ್ಥಿತರಿದ್ದರು.










