ಗ್ಯಾರಂಟಿ ಯೋಜನೆಗಾಗಿ ಬಡವರ ಅಕ್ಕಿ ಕಡಿತ ಮಾಡಿ ವಿತರಣೆ

ಹುಕ್ಕೇರಿ : ನ್ಯಾಯಬೆಲೆ ಅಂಗಡಿಗಳ್ಲಿ ಬಡವರಿಗಾಗಿ ವಿತರಿಸುವ ಪಡಿತರದಲ್ಲಿ ಅನ್ನಭಾಗ್ಯ ಅಕ್ಕಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕುತಗತು ತಂದಿದೆ. 

promotions

ಅನ್ನಭಾಗ್ಯ ಯೋಜನೆಯಲ್ಲಿ 1KG ಅಕ್ಕಿ ಕಡಿತ ಮಾಡಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

promotions

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಕ್ಕಿ ಕಡಿತ ಮಾಡಿ ವಿತರಣೆ ಮಾಡುತ್ತಿರುವ ನ್ಯಾಯ ಬೆಲೆ ಅಂಗಡಿಯ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಬಡವರು ತಿನ್ನುವ ಅನ್ನಕ್ಕೂ ಕೂಡಾ ಕಾಂಗ್ರೆಸ್ ಸರ್ಕಾರ ಕನ್ನ ಹಾಕಿ ಸಂಚಕಾರ ತಂದೊಡ್ಡಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. 

ಈ ಕುರಿತು ಮಾಹಿತಿ ಪಡೆಯಲು ಮುಂದಾದಾಗ ನಮಗೆ ಮೇಲಾಧಿಕಾರಿಗಳು ಕಡಿಮೆ ಅಕ್ಕಿ ವಿತರಣೆ ಮಾಡಲು ತಿಳಿಸಿದ್ದಾರೆಂದು ನ್ಯಾಯ ಬೆಲೆ ಅಂಗಡಿಯ ಸಿಬ್ಬಂದಿ ವಿವರಣೆ ನೀಡಿದರು.

Read More Articles