ವಿಶೇಷ ಚೇತನ ಶಿಕ್ಷಕರಿಗೆ ವೇತನ ನೀಡುವಂತೆ ಆಗ್ರಹ
- shivaraj bandigi
- 12 Jan 2024 , 8:25 PM
- Belagavi
- 678
ಬೆಳಗಾವಿ :

ವಿಶೇಷ ಶಾಲೆಯ ಶಿಕ್ಷಕರ, ಶಿಕ್ಷಕೇತರರ ಸೇವಾ ಭದ್ರತೆ ಒದಗಿಸಿ ಶಿಕ್ಷಕರು ಎದುರಿಸುತ್ತಿರುವ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಆಗ್ರಹಿಸಿ ಸೋಮವಾರ ಸಮೀಪದ ಸುವರ್ಣ ಗಾಡ್೯ನ ಬಳಿ ನಿರ್ಮಿಸಲಾದ ಟೆಂಟ್ ನಲ್ಲಿ ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ರಾಜ್ಯ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ, ಸರಕಾರಿ ಶಾಲೆಗಳು, 1982 ರ ಅನುದಾನ ನೀತಿಸಂಹಿತೆಯಲ್ಲಿ ನಡೆಯುತ್ತಿರುವ 34 ಶಾಲೆಗಳು, 2010-11 ರಲ್ಲಿ ಜಾರಿಗೊಳಿಸಿದ ಶಿತು ಕೇಂದ್ರಿಕೃತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 136 ಶಾಲೆಗಳಲ್ಲಿ ನಾವು ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿದಿದ್ದಾರೆ.
ಸರಕಾರಿ ಮತ್ತು ಅನುದಾನ ನೀತಿ ಸಂಹಿತೆಯಡಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ವಿಶೇಷ ತರಬೇತಿ ಪಡೆದ ಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸೇವಾ ಭದ್ರತೆ ವೇತನ ಕೊಡುತ್ತಿದ್ದು, ಶಿಶುಕೇಂದ್ರಿಕೃತ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಶಾಲಾ ಶಿಕ್ಷಕರು, ಶಿಕ್ಷಕೇತರರಿಗೆ ಯಾವುದೇ ಭದ್ರತೆ ಇಲ್ಲ. ಜೀವನ ನಡೆಸಲು ಸಾಕಾಗುವಷ್ಟು ವೇತನವಿಲ್ಲ ಎಂದು ದೂರಿದರು.
ಕಳೆದ ದಶಕಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದರು ಸರಕಾರದ ಈ ತಾರತಮ್ಯ, ಕರ್ನಾಟಕ ರಾಜ್ಯದಲ್ಲಿ ವಿಶೇಷ ಶಾಲೆಗಳು ಸುಮಾರು 40 ರಿಂದ 45 ವರ್ಷಗಳಿಂದ ವಿಶೇಷ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತವೆ. ಶಾಲೆಗಳಿಗೆ ಬೇಕಾಗುವ ಮೂಲ ಸೌಕರ್ಯಗಳು, ಮಕ್ಕಳಿಗೆ ಬೇಕಾಗುವಂತಹ ಹೊಸ ಹೊಸ ಅವಿಸ್ತಾರವಾದ ಕಲಿಕಾ ಸಾಮಗ್ರಿಗಳು ತಂತ್ರಜ್ಞಾನ ಬಳಕೆಯ ಕಲಿಕಾ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರದ ನಡೆಯಿಂದ ವಿಶೇಷ ಮಕ್ಕಳನ್ನು ಈ ದಿನಮಾನದಲ್ಲಿ ಸಮಾಜದ ಮುಖ್ಯವಾಹಿನಿಗೆ ತರುವುದು ತುಂಬಾ ಕಷ್ಟದ ಕೆಲಸವಾಗಿದೆ. ಅಲ್ಲದೇ ವಿಶೇಷ ವಿಶೇಷ ಶಾಲಾ ಶಿಕ್ಷಕರಾಗಲು ಹಿಂದೆ ಸರಿಯುತ್ತಿದ್ದಾರೆ. ಕಾರಣ ಇಲ್ಲಿ ಕೆಲಸ ಮಾಡುವವರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ ಮತ್ತು ಇರುವ ಸಂಬಳದಲ್ಲಿ ಈ ಹೊತ್ತಿನ ದಿನಮಾನದ ಖರ್ಚು ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.










