ಮಟಕಾ,ಜೂಜಾಟ,ಅಕ್ರಮ ಸರಾಯಿ, ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ಗಡಿಪಾರು ಆದೇಶ
- 15 Jan 2024 , 2:29 AM
- Belagavi
- 276
ಬೆಳಗಾವಿ: ನಗರದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜಾಟ, ಅಕ್ರಮ ಸರಾಯಿ, ಮುಂತಾ ಕನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಾರ್ಕೇಟ್ ಉಪವಿಭಾಗದ ಮಾರ್ಕೆಟ್ ಠಾಣೆಯಲ್ಲಿ-03, ಮಾಳಮಾರುತಿ ಠಾಣೆಯಲ್ಲಿ-02 ಹಾಗೂ ಶಹಾಪೂರ ಠಾಣೆಯಲ್ಲಿ ಒಬ್ಬ ಆರೋಪಿತನ ಮೇಲೆ ಸಂಬಂಧಿಸಿದ ಠಾಣೆಗಳ ಠಾಣಾಧಿಕಾರಿಗಳ ವರದಿಯನ್ನು ಆಧರಿಸಿ ಎನ್. ಭರಮನಿ, ಎ.ಸಿ.ಪಿ ಮಾರ್ಕೇಟ್ ಉಪವಿಭಾಗ ರವರ ಶಿಫಾರಸ್ಸಿನಂತೆ ರವೀಂದ್ರ ಗಡಾದಿ, ಐಪಿಎಸ್, ಉಪಪೊಲೀಸ್ ಆಯುಕ್ತರು (ಕಾ&ಸು) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ಹೊರಡಿಸಿರುತ್ತಾರೆ.

ಈ ಕೆಳಗಿನ ವ್ಯಕ್ತಿಗಳನ್ನು ಉಪಪೊಲೀಸ್ ಆಯುಕ್ತರು (ಕಾ&ಸು) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಬೆಳಗಾವಿರವರ ಆದೇಶದಂತೆ ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಿಗೆ ಗಡಿಪಾರು ಮಾಡುವ ಮೂಲಕ ಗಡಿಪಾರು ಆದೇಶವನ್ನು ಜಾರಿಗೊಳಿಸಲಾಗಿರುತ್ತದೆ. ಸದರಿ ವ್ಯಕ್ತಿಗಳ ವಿವರ ಈ ಕೆಳಗಿನಂತೆ ಇರುತ್ತದೆ.

| # | ಪೊಲೀಸ್ ಠಾಣೆ | ಗಡಿಪಾರು ಮಾಡಲಾದ ವ್ಯಕ್ತಿಯ ಹೆಸರು |
|---|---|---|
| 1 | ಮಾರ್ಕೇಟ್ | ಮಹಮ್ಮದರಫಿ ಮೋದಿನಸಾಬ ತಹಶೀಲ್ದಾರ, ವಯಾ:68 ವರ್ಷ, ಸಾ: ಖಂಜರಗಲ್ಲಿ ಬೆಳಗಾವಿ |
| 2 | ಮಾರ್ಕೇಟ್ | ಇಜಾರಅಹ್ಮದ ಮಹದಇಸಾಕ್ ನೇಸರಿಕರ, ವಯಾಃ 48 ವರ್ಷ, |
| 3 | ಮಾಳಮಾರುತಿ | ಜಾನಿ ಜಯಪಾಲ ಲೊಂಡೆ, ವಯಾ: 36 ವರ್ಷ, ಸರ್: ಗ್ಯಾಂಗವಾಡಿ, ಬೆಳಗಾವಿ |
| 4 | ಮಾಳಮಾರುತಿ | ಬೈರಗೌಡ ಜ್ಯೋತಿಬಾ ಪಾಟೀಲ, ವಯಾ 45 ವರ್ಷ, ಸಾ: ಪಾಟೀಲಗಲ್ಲಿ, ಕಣಬರ್ಗಿ |
| 5 | ಶಹಾಪೂರ | ನಿತಿನ ಪಾಂಡುರಂಗ ಪೇಡೇಕರ@ಪರನಕರ ವಯಸ್ಸು: 50ವರ್ಷ ಸಾ: ಶಹಾಪೂರ ಖಡೆಬಜಾರ ಬೆಳಗಾವಿ |
ಸದರಿಯವರಿಗೆ ಗಡಿಪಾರು ಮಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದಂತಾಗಿದೆ. ಈ ತರಹದ ಮಟಕಾ ಜೂಜಾಟ, ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.










