ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಕೋಡಿ
- Krishna Shinde
- 15 Jan 2024 , 12:56 AM
- Vijayapur
- 234
ವಿಜಯಪುರ: ನಗರದ ಹೋಟೆಲ್ ಒಂದರಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟ ವತಿಯಿಂದ ಪತ್ರಿಕಾಗೋಷ್ಠಿ ಯಲ್ಲಿ ವಿಧಾನಸಭಾ ಚುನಾವಣೆ 2023ರಲ್ಲಿ 136 ಶಾಸಕರನ್ನು ಮುಸ್ಲಿಂ ಸಮುದಾಯದ ಮತಗಳು ಬಹು ಮುಖ್ಯ ಪಾತ್ರ ನಮ್ಮ ಸಮಾಜದ್ದು ಇರುತ್ತದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿ ಪ್ರತಿಭಾರಿ 7ರಿಂದಾ 15 ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿಕೊಟ್ಟ ಇತಿಹಾಸ ಇದೆ. ಈ ಭಾರಿ ಕರ್ನಾಟಕ ರಾಜ್ಯದ 136 ಶಾಸಕರನ್ನು ಆಯ್ಕೆ ಮಾಡುವಲ್ಲಿ ನಿರ್ಣಾಯಾಕ ಪಾತ್ರವನ್ನು ನಮ್ಮ ಸಮುದಾಯ ವಹಿಸಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ 9 ಶಾಸಕರು ವಿಧಾನ ಸಭೆಗೆ ಪ್ರವೇಶ ಪಡೆದಿದ್ದಾರೆ, ಈ ಭಾರಿ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಬೇಕೆಂದು ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರಲ್ಲಿ ವಿನಂತಿಸುತ್ತೇವೆ ಕರ್ನಾಟಕ ರಚನೆ ಆದಾಗಿನಿಂದ ಇಲ್ಲಿಯವರೆಗೆ ಮುಸ್ಲಿಂ ಸರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಿಲ್ಲ. ಆದಕಾರಣ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಏಕೆಂದರೆ ನಮ್ಮ ಸಮಾಜದ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುತ್ತದೆ. ಹಾಗೂ ವಿಜಯಪುರ ನಗರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅಧಿಕ ಮತಗಳನ್ನು ಪಡೆದು ಅಲ್ಪ ಅಂತರದಿಂದ ಪರಭಾವಗೊಂಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಆದರಿಂದ ಮಾನ್ಯರಿಗೆ ಉನ್ನತ ಸ್ಥಾನ ಮಾನ ನೀಡಿ ಗೌರವಿಸಬೇಕು ಎಂದು ಜಿಲ್ಲಾ ಅಧ್ಯಕ್ಷ ಗ್ರಾಮ ಪಂಚಾಯಿತಿ ಸದಸ್ಯರು ಅಲ್ಪಸಂಖ್ಯಾತರಒಕ್ಕೂಟ ವಿಜಯಪುರ ಮಾತನಾಡಿದರು.

ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಒಂದು ಮತಕ್ಷೇತ್ರದಲ್ಲಿ ಇಬ್ಬರಿಗೂ ಮುಸ್ಲಿಮ್ಸ್ ಅಭಿವೃದ್ಧಿಗಳಿಗೆ ಜಿಲ್ಲಾ ಪಂಚಾಯತಿಯಲ್ಲಿ ಹಾಗೂ ಪ್ರತಿ ತಾಲೂಕು ಪಂಚಾಯಿತಿಗಳಿಗೆ ಐದು ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿ ತರುವ ಪಕ್ಷದ ಪ್ರತಿಯೊಂದು ಶಾಸಕರ ಹಾಗೂ ಕಾಂಗ್ರೆಸ್ ಧುರುಣರ ಕರ್ತವ್ಯವಾಗಿರುತ್ತದೆ. ಈ ಬಾರಿ ಅಧಿಕೃತ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಿದ್ದು ರಾಜ್ಯಕ್ಕೆ ದಿಕ್ಸೂಚಿಯಾಗಿರುತ್ತದೆ ಮುಂಬರುವ ಚುನಾವಣೆಯಲ್ಲಿ ಅಹಿಂದ ಮತಗಳನ್ನು ಒಂದುಗೂಡಿಸಿ ಪಕ್ಷ ನೀಡಿದ ಜವಾಬ್ದಾರಿಯುತ ಕಾರ್ಯವನ್ನು ನಮ್ಮ ಸಮಾಜದ ನಿರ್ಮಿಸುತ್ತೇವೆ ಎಂದು ಜಿಲ್ಲಾ ಕಾರ್ಯದರ್ಶಿ ಚಾಂದಪಾಶಾ ಹವಾಲದಾರ ಕಲಕೇರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಾಂದಪಾಶಾ ಹವಾಲದಾರ ಕಲಕೇರಿ ಕಾರ್ಯದರ್ಶಿ, ಪೈಗಂಬರ ಮುಲ್ಲಾ, ಮಾಶ್ಯಕಸಾಬ ಕಮತಗಿ , ರಾಜಅಹ್ಮದ. ಶಿರಸಗಿ, ಶಫಿಕ ಮುಜಾವರ, ಇಮ್ರಾನ ಜಾಗೀರದಾರ , ಅಬ್ಬಸಅಲಿ ಮುಲ್ಲಾ, ಶಮಶೇರಅಲಿ ಮುಲ್ಲಾ, ಮಹಿಬೂಬ, ಎ ಎಮ್ ಪಾಟೀಲ ಇದ್ದರು.










