ಧರ್ಮ ಜಾಗೃತಿ ಪಾದಯಾತ್ರೆ
- shivaraj bandigi
- 24 Feb 2024 , 9:55 AM
- Belagavi
- 340
ಬೈಲಹೊಂಗಲ : ಇಂದಿನ ಯುವಕರು ದುಶ್ಚಟಗಳ ದಾಸರಾಗಿ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವದು ವಿಷಾಧನೀಯ ಎಂದು ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು.

ಅವರು ಪಟ್ಟಣದ ಶ್ರೀ ಶಾಖಾಮೂರುಸಾವಿರಮಠದ ಕಾಯಕಯೋಗಿ ನೀಲಕಂಠ ಮಹಾಶಿಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಧರ್ಮ ಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುವಕರು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದು ಅವರಲ್ಲಿ ಜಾಗೃತಿಯ ಅವಶ್ಯಕತೆ ಇದೆ. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಪಾದಯಾತ್ರೆಯು ಪಟ್ಟಣದ ಚನ್ನಮ್ಮ ನಗರ ಒಂದನೇಯ ಕ್ರಾಸದ ಈಶ್ವರ ದೇವಸ್ಥಾದಿಂದ ದಾನಮ್ಮದೇವಿ ದೇವಸ್ಥಾನದ ವರೆಗೂ ನಡೆಯಿತು.
ದಾನಮ್ಮದೇವಿ ದೇವಸ್ಥಾನದ ಟ್ರಸ್ಟ ಕಮೀಟಿ ಅಧ್ಯಕ್ಷ ಪ್ರಮೋಧಕುಮಾರ ವಕ್ಕುಂದಂಠ ದಂಪತಿಗಳು, ಮಹಾದೇವಿ ಅಂಗಡಿ, ವೇ.ಮೂ.ವಿಶ್ವನಾಥ ಹಿರೇಮಠ, ಮಲ್ಲಿಕಾರ್ಜುನ ವಕ್ಕುಂದಮಠ, ಅಶೋಕ ಸವದತ್ತಿ ಸೇರಿದಂತೆ ಬಡಾವಣೆಯ ಸಾರ್ವಜನಿಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










