ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಧರ್ಮಸ್ಥಳದ ಧರ್ಮಾಧಿಕಾರಿ
- 15 Jan 2024 , 3:26 AM
- Dakshina Kannada
- 190
ಡಾ ವೀರೇಂದ್ರ ಹೆಗಡೆಯವರನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ರಾಯಬಾಗ ಮತಕ್ಷೇತ್ರದ ಶಾಸಕರು ಆದಿ ಜಾಂಬವ ನಿಗಮದ ಅಧ್ಯಕ್ಷರು ಆದ ಶ್ರೀ ದುರ್ಯೋಧನ ಐಹೊಳೆಯವರ ಪರವಾಗಿ ಅವರ ಸುಪುತ್ರ ಅರುಣ ಐಹೊಳೆಯವರು ಧರ್ಮಸ್ಥಳದಲ್ಲಿ ಡಾ ವೀರೇಂದ್ರ ಹೆಗಡೆಯವರನ್ನ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದಿವಾಕರ ಭಟ ವಿರಾಜ ಪೇಟೆ ಇವರು ಉಪಸ್ಥಿತರಿದ್ದರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ ವೀರೇಂದ್ರ ಹೆಗಡೆಯವರು ಇವತ್ತು ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ಬಂದು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶಾಸಕರಾದ ದುರ್ಯೋಧನ ಐಹೊಳೆಯವರ ಪರವಾಗಿ ಅವರಸುಪುತ್ರ ಅರುಣ್ ಐಹೊಳೆ ಯವರು ಗೌರವಿಸಿ ಅಭಿನಂದಿಸಿರುವುದು ನಮಗೆ ಅತೀವ ಸಂತೋಷವನ್ನು ತಂದಿದೆ, ಮಂಜುನಾಥ ಸ್ವಾಮಿ ಧಾರ್ಮಿಕವಾಗಿ ಸೇವೆಸಲ್ಲಿಸಿರುವ ಜೊತೆ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ರಾಜ್ಯಸಭಾ ಸ್ಥಾನವನ್ನ ನೀಡಿದ್ದಾನೆ ಸ್ವಾಮಿಯ ಅನುಗ್ರಹ ಇನ್ನು ಹೆಚ್ಚಿನ ಕಾರ್ಯವನ್ನಮಾಡಿ ಅವರಿಗೆ ಸಂತೃಪ್ತಿಯನ್ನ ನೀಡಿ ಸೇವೆಯನ್ನು ಮಾಡುತ್ತೇವೆ, ಹುಕ್ಕೇರಿ ಹಿರೇಮಠ ಭಾವೈಕ್ಯತೆಯ ಕೇಂದ್ರವಾಗಿ ಇವತ್ತು ದಸರಾ ಉತ್ಸವ ಕಾರ್ಯಕ್ರಮವನ್ನು ವೈಶಿಷ್ಟ ಪೂರ್ಣವಾಗಿ ಮಾಡುತ್ತಿರುವುದು ನಮಗೆ ನಮಗೆ ಅತಿ ಖುಷಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಗೌರವಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಡಾ ವೀರೇಂದ್ರ ಹೆಗಡೆಯವರ ನಿಸ್ವಾರ್ಥ ಸೇವೆ ಪ್ರಯತ್ನದ ಫಲ ಮತ್ತು ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ಇದ್ದಾವೆ ಧರ್ಮಸ್ಥಳ ಕ್ಷೇತ್ರ ಎಂದರೆ ಅದು ಎಲ್ಲರಿಗೂ ಶ್ರದ್ದೆಯ ಸ್ಥಾನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಾಕಷ್ಟು ಸೇವಾ ಕಾರ್ಯವನ್ನ ಮಾಡುತ್ತಿರುವ ಡಾ ವೀರೇಂದ್ರ ಹೆಗಡೆಯವರು ಹುಕ್ಕೇರಿಗೂ ಕೂಡ ಬಂದಿರುವುದನ್ನ ಇಂದು ನಾವು ಸ್ಮರಸಿಕೊಳುತ್ತೆವೆ ಎಂದರು. ಶಾಸಕರ ಪರವಾಗಿ ಡಾ ವಿರೇಂದ್ರ ಹೆಗ್ಗಡೆಯವರನ್ನ ಗೌರವಿಸಿದ ಐಹೊಳೆ ಅವರು ಮಾತನಾಡಿ ನಮ್ಮ ಭಾಗ್ಯ ಇವತ್ತು ಡಾ ವೀರೇಂದ್ರ ಹೆಗಡೆಯವರನ್ನ ದರ್ಶನ ಪಡೆದು ಅವರನ್ನ ಗೌರವಿಸಿ ಅವಕಾಶ ನಮಗೆ ದೊರಕಿದೆ ವೀರೇಂದ್ರ ಹೆಗಡೆಯಲ್ಲಿರುವ ತಾಳ್ಮೆ ಸಹನೆ ನಮಗೆಲ್ಲರಿಗೂ ಕೂಡ ಆದರ್ಶ ಎಂದರು.










