ವಿಶೇಷ ಚೇತನರಿಗೆ ಪರಿಸರ ಸ್ನೇಹಿ ಬೈಕ್ ವಿತರಣೆ

ಅಥಣಿ : ಕ್ಷೇತ್ರದ ವಿಷೇಶ ಚೇತನರಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಶಾಸಕ ಲಕ್ಷ್ಮಣ ಸವದಿ  ಒಂದು ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.

promotions

ಪ್ರತಿ ದೀಪಾವಳಿ ಹಬ್ಬಕ್ಕೆ ಕ್ಷೇತ್ರದಲ್ಲಿರುವ ವಿಶೇಷ ಚೇತನರನ್ನ ಗುರುತಿಸಿ ಸ್ವಂತ ಖರ್ಚಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್  ಬೈಕ್ ನೀಡಲು ಮುಂದಾಗಿದ್ದಾರೆ.

promotions

ಹೌದು,,, ಕ್ಷೇತ್ರದಲ್ಲಿ ಹಲವು ಬದಲಾವಣೆ ನಿರೀಕ್ಷೆಗೆಯಿಟ್ಟ ಶಾಸಕ ಲಕ್ಷ್ಮಣ ಸವದಿ ಬಡ ವಿಶೇಷ ಚೇತನರಿಗೆ ಪ್ರತಿ ದೀಪಾವಳಿ ಹಬ್ಬಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬೈಕ್ ನೀಡುತ್ತಿದ್ದಾರೆ ಕಳೆದ ವರ್ಷ ಬಳ್ಳಿಗೇರಿ ಗ್ರಾಮದ ವಿಶೇಷ ಚೇತನ ಹನುಮಂತ ಕುರುಬರ ಇತನಿಗೆ ಬೈಕ್ ನೀಡಲಾಗಿತ್ತು ಅದು ಅಷ್ಟೇ ಯಶಸ್ವಿಯಾಗಿ ಬಾಳಿಕೆ ಬಂದಿದೆ ಮತ್ತೆ ಈ ವರ್ಷ ಇಬ್ಬರು ವಿಶೇಷ ಚೇತನರನ್ನ ಗುರುತಿಸಿ ಎರಡು ಬೈಕ ವಿತರಣೆ ಮಾಡಲಾಯಿತು.

ಸುಮಾರು ಒಂದು ಲಕ್ಷ ನಲವತ್ತು ಸಾವಿರ ಬೆಲೆಬಾಳುವ ಬೈಕ್ ಇದಾಗಿದ್ದು ಹಲವು ವಿಷೆಶತೆಗಳಿಂದ ಕುಡಿದೆ ಎರಡು ಗಂಟೆ ಚಾರ್ಜ್ ಗೆ ಸುಮಾರು ೯೦ ಕೀ ಮೀ ಓಡುವ ಬೈಕ್ ಈಗಾಗಲೆ ಅಥಣಿ ಪಟ್ಟನದಲ್ಲಿ ಎಲ್ಲರ ಗಮನ ಸೆಳೆದಿದೆ.

Read More Articles