ಡಾ. ಬಾಬು ಜಗಜೀವನರಾಮ್ ಅವರ 117ನೇ ಜಯಂತಿ ಆಚರಣೆ

ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿಯಾದ ಡಾ. ಜಗಜೀವನ್ ರಾಮ್ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ತುಂಬಾ ಸರಳವಾಗಿ ಆಚರಿಸಲಾಯಿತು

promotions

ಬಾಬೂಜಿ ಎಂದೇ ಖ್ಯಾತರಾದ ಜಗಜೀವನ್ ರಾಮ್ ಅವರು ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಹೋರಾಟಗಾರ, ಖಿನ್ನತೆಗೆ ಒಳಗಾದ ವರ್ಗಗಳ ಹೋರಾಟಗಾರ, ಒಬ್ಬ ಅತ್ಯುತ್ತಮ ಸಂಸದೀಯ ಪಟು, ನಿಜವಾದ ಪ್ರಜಾಪ್ರಭುತ್ವವಾದಿ, ಒಬ್ಬ ಪ್ರತಿಷ್ಠಿತ ಕೇಂದ್ರ ಮಂತ್ರಿ, ಸಮರ್ಥ ಆಡಳಿತಗಾರ ಮತ್ತು ಅಸಾಧಾರಣ ಪ್ರತಿಭಾನ್ವಿತ ವಾಗ್ಮಿ ದೀನ ದಲಿತರ ಪರವಾಗಿ ಹಗಲಿರು ದುಡಿದ ಮಹಾನ್ ದೇಶಭಕ್ತ ಇಂದು ಅವರ 117ನೇ ಜಯಂತಿಯನ್ನು ಮಾದಿಗ ಸಮಾಜದ ಮುಖಂಡರೆಲ್ಲ ಸೇರಿ ಜಯಂತಿಯನ್ನು ಆಚರಿಸಲಾಯಿತು

promotions

ಇದೇ ಸಂದರ್ಭದಲ್ಲಿ ಹಲ್ಯಾಳ ಮಾದಿಗ ಸಮಾಜದ ಮುಖಂಡರುಗಳಾದ ಮಲ್ಲಪ್ಪ ಮಾದರ. ಶ್ರೀಶೈಲ್ ಮಾದರ.ಸುರೇಶ ಮಾದರ. ಕೃಷ್ಣಪ್ಪ ಮಾದರ. ಪುಂಡಲೀಕ ಮಾದರ. ಸಿದ್ದು ಮಾಂಗ. ಚಂದ್ರವ್ವ ಮಾದರ. ರಮಾ ಮಾದರ. ಜರಿನಾ ಮಾದರ. ಸರ್ವ ಮಾದಿಗ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ವರದಿ : ರಾಹುಲ್  ಮಾದರ

Read More Articles