ಭಜನಾ ಪದಗಳ ಮೂಲಕ ಮತಯಾಚಿಸಿದ ಡಾ. ವಿಶ್ವನಾಥ ಪಾಟೀಲ
- Shivaraj Bandigi
- 15 Jan 2024 , 1:17 PM
- Belagavi
- 184
ಬೈಲಹೊಂಗಲ : ಮತಕ್ಷೇತ್ರದ ಅಭಿವೃದ್ಧಿ ನನ್ನ ಮೊದಲ ಆಧ್ಯತೆ, ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಸಮಸ್ಯೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಪ್ರಯತ್ನ ಮಾಡಿದ್ದೇನೆಂದು ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಮತಕ್ಷೇತ್ರದ ಏಣಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿ, ಕಬ್ಬಿನ ಜೊತೆಗೆ ಇರುವ ರೈತನ ಗುರುತು ನನ್ನ ಚಿನ್ಹೆಯಾಗಿದ್ದು ಈ ಭಾಗದ ಜನರು ನನಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.











