ಡಾ. ಮಹಾಂತೇಶ ಶಾಸ್ತ್ರೀಗಳಿಂದ ಗದಗ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ಸತ್ಕಾರ.
- Shivaraj Bandigi
- 14 Jan 2024 , 10:35 PM
- Belagavi
- 218
ಬೈಲಹೊಂಗಲ : ಪಟ್ಟಣದ ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನ ವೇ. ಮೂ.ಡಾ. ಮಹಾಂತೇಶ ಶಾಸ್ತ್ರೀಗಳು ಗದಗಿನ ಪುಣ್ಯ ಶ್ರಮಕ್ಕೆ ಅನ್ನದಾಸೋಹ, ಮೂಖ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಡುತ್ತಿರುವ ಸೇವೆ ಶ್ಲಾಘನೀಯವಾಗಿದ್ದು ಎಂದು ಗದಗ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಹೇಳಿದರು.

ಅವರು ಪಟ್ಟಣದ ಮುರಗೋಡ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದು ಮಾತನಾಡಿ, ಮಹಾಂತೇಶ ಶಾಸ್ತ್ರೀಗಳು ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಜನರ ಹಿತ ಕಾಪಾಡುತ್ತಿದ್ದಾರೆ.

ಅವರು ನಮ್ಮ ಆಶ್ರಮದ ಅಂದ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ಮಾಡಿ ಹಲವಾರು ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿದ್ದಾರೆ, ಪಂಚಾಕ್ಷರಿ ಗವಾಯಿಗಳವರ ಪುಣ್ಯಸ್ಮನೋತ್ಸವದ ಕಾರ್ಯಕ್ರಮದ ಅಂಗವಾಗಿ ಅಂದ, ಮೂಖ ಮಕ್ಕಳಿಗೆ ಉಚಿತ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಬಂದಿರುವುದು ನಮ್ಮ ಗದುಗಿನ ಪುಣ್ಯ ಎಂದರಲ್ಲದೆ ಶ್ರೀಮಠದ ಆಶೀರ್ವಾದ ಅವರ ಮೇಲೆ ಸದಾಕಾಲ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಾಂತೇಶ ಶಾಸ್ತ್ರಿ ದಂಪತಿಗಳು ಕಲ್ಲಯ್ಯಜ್ಜನವರನ್ನು ಸತ್ಕರಿಸಿದರು. ದೇವಸ್ಥಾನದ ಸದ್ಭಕ್ತರು ಇದ್ದರು.










