ರೋಡಿಗೆ ಹರಿದು ಬಂದ ಡ್ರೈನೇಜ್ :ಕಣ್ಮುಚ್ಚಿ ಕುಳಿತ ಬೆಳಗಾವಿ ಮಹಾನಗರ ಪಾಲಿಕೆ
- Krishna Shinde
- 14 Jan 2024 , 11:50 PM
- Belagavi
- 225
ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಕೂಲ್ ಸಿಟಿ ಮತ್ತು ಕುಂದಾ ನಗರ ಎಂದು ಬಿರುದು ಪಡೆದು ಹಳೆಮಾತಾಗಿದ್ದು ಸ್ಮಾರ್ಟಸಿಟಿ ಬರಿ ಹೆಸರಿಗಷ್ಟೇ ಉಳಿದಿದೆ.

ಬೆಳಗಾವಿ ಮಹಾನಗರ ಅಧೀನದಲ್ಲಿ ಬರುವ ಶ್ರೀನಗರ ಡಬಲ್ ರೋಡ ಮೇಲೆ ಡ್ರೈನೇಜ್ ನೀರು ರೋಡ ಮೇಲೆಯೇ ಹರಿದು ಹೋಗುತಿದ್ದರು ಅಧಿಕಾರಿಗಳು ನೋಡಿ ಸುಮ್ಮನಾಗಿದ್ದರೆ.

ಇನ್ನು ಮಳೆಗಾಲದ ಮಳೆ ಪ್ರಾರಂಭವಾಗಿಲ್ಲ ಈಗಲೇ ಡ್ರೈನೇಜ್ ತುಂಬಿ ಹರಿದು ರೋಡಿಗೆ ಬಂದಿದೆ ಮತ್ತು ಮಳೆಯಾದರೆ ..? ನಿವಾಸಿಗಳ ಮನೆಯಲ್ಲಿಯೆ ಡ್ರೈನೇಜ್ ನೀರು ನುಗ್ಗುತ್ತೆ ಅಂತ ನಿವಾಸಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಈಗಲೇ ಕ್ರಮ ತೆಗೆದುಕೊಂಡು ಸರಿಮಾಡುವಂತೆ ನಿವಾಸಿಗಳು ಲೋಕಲವಿವ ವಾಹಿನಿ ಮೂಲಕ ಮಹಾನಗರ ಪಾಲಿಕೆಗೆ ವಿನಂತಿಸಿದ್ದಾರೆ.










