ಬೆಳೆಗಾವಿಯ ಮಧ್ಯ ಭಾಗದಲ್ಲೇ ಒಳಚರಂಡಿ ಓವರಫ್ಲೋ : ದನಿ ಎತ್ತಿದ ಭೀಮಸೇನೆ
- Shivaraj Bandigi
- 15 Jan 2024 , 3:22 AM
- Belagavi
- 203
ಬೆಳಗಾವಿ : ಚೆನ್ನಮ್ಮ ಸರ್ಕಲದಿಂದ ಮುಂದೆ ಇರುವ ಕೋರ್ಟ್ ಆವರಣದ ಹತ್ತಿರದ ರಸ್ತೆಯಲ್ಲಿ ಚರಂಡಿ ತೆರಿದಿದರುವ ಕಾರಣ ಕಲುಷಿತ ನೀರು ರಸ್ತೆಗೆ ಮೇಲೆ ಹರಿದಾಡುತ್ತಿದೆ, ಸಾಕಷ್ಟು ವಾಹನ ಸವಾರರು ಜೋರಾಗಿ ಹೋಗುವುದರಿಂದ ವಕೀಲರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಹಲವು ದಿನಗಳಿಂದ ಈ ತೊಂದರೆಯಾಗುತ್ತಿದೆ.

ಒಳ ಚರಂಡಿ ನೀರು ಹೊರಗೆ ಬಾರದಂತೆ ನೋಡಿಕೊಳ್ಳಬೇಕು ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ರೀವವಾಗಿ ಖಂಡಿಸಿದ ಕರ್ನಾಟಕ ಭೀಮ್ ಸೇನೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಪ್ರವೀಣ ಮಾದರ ಮಹಾನಗರ ಪಾಲಿಕೆ ಆಯುಕ್ತರು , ಮಾನ್ಯ ಜಿಲ್ಲಾಧಿಕಾರಿಗಳು ರಸ್ತೆ ಸಂಚಾರಿಗಳಿಗೆ ಮತ್ತು ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು .











