ಚಾಣಕ್ಯ ಚಿರತೆ vs ಗಜಪಡೆ : ಚಿರತೆಯನ್ನು ಪತ್ತೆಹಚ್ಚುತ್ತಾ ಗಜಪಡೆ..?
- 15 Jan 2024 , 4:04 AM
- Belagavi
- 156
ಬೆಳಗಾವಿ : ಬೆಳಗಾವಿ ಜನರ ನಿದ್ದೆಗೆಡಿಸಿ ಚಿರತೆಯನ್ನು ಪತ್ತೆಹಚ್ಚುತ್ತಾ ಗಜಪಡೆ. ಕುಂದಾನಗರಿಗೆ ಸಕ್ರೆಬೈಲು ಆನೆ ಬಿಡರಾದ ಎರಡು ಆನೆಗಳು ಬಂದು ಕಾರ್ಯಾಚರಣೆ ನಡೆಸಲಿವೆ. ತಡರಾತ್ರಿ ಗಾಲ್ಫ್ ಮೈದಾನ ತಲುಪಿದ ಎರಡು ಆನೆಗಳು, ಬೆಳಗಾವಿಯಲ್ಲಿ 20ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ ನಡೆಸಲಿವೆ.

ಇಂದು ಚಿರತೆ ಶೋಧ ಕಾರ್ಯಾಚರಣೆಯಲ್ಲಿ ಎರಡು ಆನೆಗಳು ಬಳಕೆ ಮಾಡಲಾಗುತ್ತಿದ್ದು, ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ನಡೆಯಲಿರುವ ಸರ್ಚ್ ಆಪರೇಷನ್. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಆಗಮಿಸಿರುವ ಎರಡು ಆನೆಗಳು. ದಟ್ಟವಾದ ಮರಗಿಡಗಳ ಮಧ್ಯೆ ಚಿರತೆ ಅಡಗಿರುವ ಶಂಕೆ ಇದೆ.ಆನೆಗಳ ಸಹಾಯದಿಂದ ದಟ್ಟವಾದ ಮರಗಿಡಗಳ ಮಧ್ಯೆ ಸರ್ಚ್ ಆಪರೇಷನ್ ಮಾಡುತ್ತಿದೆ.

20 ದಿನಗಳಿಂದ ಪೊಲೀಸ್,ಅರಣ್ಯ ಇಲಾಖೆ ನಿದ್ದೆಗೆಡಿಸಿರುವ ಚಿರತೆ 200 ಪೊಲೀಸ್, ಅರಣ್ಯ ಸಿಬ್ಬಂದಿ ನಿರಂತರ ಕೋಂಬಿಂಗ್ ನಡೆಸಿದರೂ ಪತ್ತೆಯಾಗದ ಚಿರತೆ. ಸೋಮವಾರ ಬೆಳಗ್ಗೆ ಖಾಸಗಿ ಬಸ್ ಚಾಲಕನ ಮೊಬೈಲ್ ನಲ್ಲಿ ಸೆರೆಯಾಗಿದ್ದ ಚಿರತೆ ಚಲನವಲನ ಕಂಡು ಚಿರತೆ ಹಿಡಿಯಬೇಕು ಎನ್ನುವಷ್ಟರಲ್ಲಿ ಮರೆಯಾಗಿ ಹೋಗಿದೆ.
ಬಳಿಕ ಹಿಂಡಲಗಾ ರಸ್ತೆಯಿಂದ ಗಾಲ್ಫ್ ಮೈದಾನಕ್ಕೆ ನುಗ್ಗಿರುವ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಎದುರು ಮೂರೇ ಸೆಕೆಂಡ್‌ನಲ್ಲಿ ಎಸ್ಕೇಪ್ ಆಗಿತ್ತು. ತಂತಿ ಬೇಲಿಗೆ ಗುದ್ದಿ ಗಾಲ್ಫ್ ಮೈದಾನದೊಳಗೆ ನುಗ್ಗಿ ಮರೆಯಾಗಿರುವ ಚಿರತೆ ಗಾಲ್ಫ್ ಮೈದಾನದಲ್ಲಿ ಎಂಟು ಬೋನು, 22 ಟ್ರ್ಯಾಪ್ ಕ್ಯಾಮರಾ ಅಳವಡಿಸಿದರೂ ನೋ ಯೂಸ್. ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದೆ.ಇನ್‌ಫ್ರಾರೆಡ್ ಡ್ರೋನ್ ಹಾರಾಟಕ್ಕೆ ಸಿಗದ ರಕ್ಷಣಾ ಇಲಾಖೆಯ ಅನುಮತಿ ಅತ್ಯಾಧುನಿಕ ಹೈಡೆಫನೀಷನ್ ಕ್ಯಾಮರಾ ಬಳಸಿ ಶೋಧ ನಡೆಸಿದರೂ ಪತ್ತೆಯಾಗದ ಚಾಣಾಕ್ಷ್ಯ ಚಿರತೆ ಪತ್ತೆಯಾಗಿಲ್ಲ. ಗಜರಾಜನ ಎಂಟ್ರಿಯಿಂದ ಇಂದಾದರೂ ಹೊರಬರುತ್ತಾ ಚಾಣಾಕ್ಷ ಚಿರತೆ ಎನ್ನುವ ಕುತೂಹಲ ಎಲ್ಲರಲ್ಲಿದೆ.










