ತುರ್ತು ಪರಿಸ್ಥಿತಿ ಪ್ರತಿಭಟನೆ ! ಶಾಸಕಿ ಜೊಲ್ಲೆ ಸೇರಿ ಹಲವರ ಬಂಧನ

ಚಿಕ್ಕೋಡಿ : ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರಿಂದ ಅಮಾಯಕ ಜನರು  ಜೈಲು ಸೇರುವಂತಾಯಿತು ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಅವರು ಇಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ,   ತುರ್ತು ಪರಿಸ್ಥಿತಿ ಹೇರಿದ್ದ ಹಿನ್ನಲೆಯಲ್ಲಿ  ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 

promotions

ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯಲ್ಲಿ  ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. 

promotions

ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದ   ಬಿಜೆಪಿ ಕಾರ್ಯಕರ್ತರು, 

ಪ್ರತಿಭಟನಾಕಾರರನ್ನು ಚಿಕ್ಕೋಡಿ  ಪೊಲೀಸರು ಬಂಧಿಸಿದರು.  ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ‌ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಭಾಗಿ ಸೇರಿದಂತೆ  ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

Read More Articles