ಈಶ್ವರಪ್ಪ ಹಿಂದುಳಿದ ನಾಯಕ, ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಮೇಶ ಜಾರಕಿಹೊಳಿ

ಬೆಳಗಾವಿ : ಮಾಜಿ ಸಚಿವ ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯ ವಿಶೇಷತೆ ಎನೂ ಇಲ್ಲ ಯಾವುದೇ ರಾಜಕೀಯ ಆಗಿಲ್ಲವೆಂದು ಮಾಜಿ‌ಸಚಿವ ರಮೇಶ ಜಾರಕಿಹೊಳಿ ಹೇಳಿದರು. 

promotions

ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಂಬೈದಿಂದ ಬೆಂಗಳೂರಿಗೆ ಬಂದಿದ್ದೆ ಅವಾಗ ಯತ್ನಾಳ ಅವರು  ಕರೆ ಮಾಡಿ, ಈಶ್ವರಪ್ಪನವರ  ಮನೆಗೆ ಹೋಗುತ್ತಿದ್ದು, ನನಗೂ ಬರುವಂತೆ ಹೇಳಿದ್ದರು ನಾನೂ ಹೋದೆ.

promotions

ಅಲ್ಲಿಗೆ ಹೋದ ಮೇಲೆ ತಿಳಿಯಿತು  ರಾಜುಗೌಡ ಕೂಡಾ ಬಂದಿದ್ದ ವಿಷಯ ಗೊತ್ತಿರಲಿಲ್ಲ ಅವರು ಇದಿದ್ದು ಗೊತ್ತಿದ್ದರೆ  ನಾನು ಮನೆಯ ಒಳಗೆ  ಹೋಗುತ್ತಿರಲಿಲ್ಲ  ನಾನು ಹೊರ ಬರ್ತಿದೆ ಎಂದರು. 

ಮೀಸಲಾತಿ ಕುರಿತು ಯತ್ನಾಳ ಮತ್ತು ಈಶ್ವರಪ್ಪ  ಅವರು ಚರ್ಚೆ ಮಾಡತಿದ್ರು. ಈಶ್ವರಪ್ಪ ಅವರನ್ನ ಬಿಜೆಪಿಗೆ ಕರೆದುಕೊಂಡು ಬರುವ ಶಕ್ತಿ ನನ್ನದಲ್ಲ ರಾಷ್ಟ್ರೀಯ ನಾಯಕರು ಅವರನ್ನ ಉಚ್ಚಾಟನೆ ಮಾಡಿದ್ದಾರೆ ಎಂದರು. 

ಒಳಗೆ ಎನಾಯಿತು ಅಂತಾ  ರಾಜುಗೌಡ ಕಥೆ ಕಟ್ಟಿ ಹೇಳಿದ್ದಾನೆ. ಈಶ್ವರಪ್ಪ ಮನೆಯಲ್ಲಿ ಎನೂ ಚರ್ಚೆ ಅಗಿದೆ ಅಂತಾ ಗೊತ್ತಾದ್ರೇ ವಿಜಯೇಂದ್ರ ಹೊಡೆಯುತ್ತಾನೆ ಎಂದರು. 

ರಾಯಣ್ಣ ಬ್ರಿಗೇಡ್ ಮಾಡ್ತಿರುವ ವಿಚಾರವಾಗಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ.

ಭಿನ್ನಮತೀಯ ಅನ್ನುವ  ಟ್ಯಾಗ್ ತೆಗೆಯಿರಿ. ಪಕ್ಷ ಶುದ್ಧೀಕರಣ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ. ಈಶ್ವರಪ್ಪ ಇವತ್ತಿಗೂ ಹಿಂದುಳಿದ ನಾಯಕ ಅವರ ಬಗ್ಗೆ ಇವತ್ತು ಗೌರವ ಇದೆ‌.

ಈಶ್ವರಪ್ಪ ಮನೆಗೆ ಹೋಗಿದ್ದು ರಾಜಕೀಯ ಮಾಡಿದ್ದು ನೋವಾಗಿದೆ ಎಂದರು‌ ನಾವು ಎನೇ ಮಾಡಿದ್ರೂ ಪಕ್ಷದ ಚೌಕಟ್ಟಿನಲ್ಲಿ ಇರುತ್ತೇವೆ.

ರಾಜುಗೌಡ ಯಡಿಯೂರಪ್ಪ ಶಿಷ್ಯ ಅಂತಾ ಗುರುತಿಸಿಕೊಂಡಿದ್ದಾನೆ ಎಂದರು.

Read More Articles