ಹುಬ್ಬಳ್ಳಿ, ಪುಣೆಯಲ್ಲಿಯೂ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ: ಡಾ. ಕೋರೆ
- 17 Dec 2023 , 11:01 PM
- Belagavi
- 188
ಬೆಳಗಾವಿ: ನೂತನವಾಗಿ ನರ‍್ಮಿಸಲಾಗುತ್ತಿರುವ 200 ಹಾಸಿಗೆಗಳ ಕ್ಯಾನ್ಸರ ಆಸ್ಪತ್ರೆಯನ್ನು ಇದೇ ನವೆಂಬರನಲ್ಲಿ ಲೋಕಾರ್ಪಣೆಗೊಳಿಸುವದರೊಂದಿಗೆ, ಈ ಭಾಗದ ಕ್ಯಾನ್ಸರ ರೋಗಿಗಳಿಗೆ ಕೈಹೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವದರ ಜೊತೆ ಜೊತೆಗೆ ಹುಬ್ಬಳ್ಳಿ ಹಾಗೂ ಪುಣೆಯಲ್ಲಿನ ಆಸ್ಪತ್ರೆಗೆಗಳನ್ನು ಜನಸೇವೆಗೆ ಅರ್ಪಿಸಲಾಗುವದು ಎಂದು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 75ನೇ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, 1984ರಲ್ಲಿ ಸಂಸ್ಥೆಯ ಕರ‍್ಯಾಧ್ಯಕ್ಷನಾದಾಗ ಪ್ರಥಮ ಸಭೆಯಲ್ಲಿಯೇ ಆಸ್ಪತ್ರೆ ನಿರ್ಮಾಣದ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಕೆಲವೇ ವರ್ಷಗಳಲ್ಲಿ ಬೃಹತ ಆರೋಗ್ಯ ಕೇಂದ್ರದ ಸಂಕುಲ ಯಲೆ ಎತ್ತಿ ನಿಂತಿತು. ನನಗೆ ಪುನರಜನ್ಮ ನೀಡಿದ ಆಸ್ಪತ್ರೆಯಲ್ಲಿ ಸುಮಾರು 1.5 ಕೋಟಿಗೂ ಅಧಿಕ ಜನರ ಹೊರರೋಗಿಗಳು ಹಾಗೂ 12 ಲಕ್ಷಕ್ಕೂ ಅಧಿಕ ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 50 ಸಾವಿರಕ್ಕೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಶಿಕ್ಷಣದೊಂದಿಗೆ ಆರೋಗ್ಯ ಸೇವೆಯನ್ನೂ ಕಲ್ಪಿಸಲಾಗುತ್ತಿದೆ ಎಂದ ಅವರು, ಆಸ್ಪತ್ರೆಗೆ ಬರುವ ರೋಗಿಗಳನ್ನು ದೇವರೆಂದು ಭಾವಿಸಿ ಚಿಕಿತ್ಸೆ ನೀಡಿ. ಗುಣಮಟ್ಟದ ಹಾಗೂ ಪ್ರೀತಿಯ ಸೇವೆ ಹಾಗೂ ಆರೈಕೆ ಸದಾ ಇರಲಿ ಎಂದು ಸಲಹೆ ನೀಡಿದರು.

ಬ್ರಟಿಷರ ವಿರುದ್ದ ಹೋರಾಡಿದ ಪ್ರಥಮ ಜಿಲ್ಲೆ ಅದೂ ಕೂಡ ಮಹಿಳೆ ರಾಣಿ ಚೆನ್ನಮ್ಮ. 1874 ರಲ್ಲಿ ಹೊತ್ತಿದ ಕಿಡಿ, 100 ವರ್ಷಗಳ ನಂತರ, ಬಾಲಗಂಗಾಧರನಾಥ ತಿಲಕ, ವಲ್ಲಭಬಾಯಿ ಪಟೇಲ, ಭಗತ ಸಿಂಗ, ಗಂಗಾಧರ ದೇಶಪಾಂಡೆ, ಹರ್ಡಿಕರ ಮಂಜಪ್ಪ ಸೇರಿದಂತೆ ಹಲವಾರು ಜನ ನಿರಂತರ ಹೋರಾಟ ಮಾಡಿದವರು. ಬೆಳಗಾವಿ ಜಿಲ್ಲೆ ಮಹಾತ್ಮಾ ಗಾಂಧಿಜೀ ಅವರು 7 ಬಾರಿ ಭೇಟಿ ನೀಡಿದ್ದಾರೆ. ಅತೀ ಹೆಚ್ಚು ಸ್ವಾತಂತ್ರ‍್ಯ ಹೋರಾಟಗಾರರನ್ನು ಹೊಂದಿರುವ ಜಿಲ್ಲೆ ನಮ್ಮದು. ನಾನೂ ಕೂಡ ಅದೇ ಮನೆತನದವ ಎಂದು ಅಭಿಮಾನದಿಂದ ನುಡಿದರು.
ಧ್ವಜಾರೋಹನ ನೆರವೇರಿಸಿ ಮಾತನಾಡಿದ ಮರಾಠಾ ಲೈಟ್ ಇನ್ಫೆಂಟ್ರಿಯ ಬ್ರಿಗೇಡಿಯರ ಜಾಯದೀಪ ಮುಖರ್ಜಿ ಅವರು ಮಾತನಾಡಿ, ವೈದ್ಯರೂ ಕೂಡ ಸೈನಿಕರೆ ಅವರು ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಹೋರಾಡಿದರೆ ನಾವು ದೇಶ ರಕ್ಷಣೆಗಾಗಿ ಹೋರಾಡುತ್ತಾರೆ. ಅವರೂ ಸಮವಸûçದಾರಿಗಳು. ಕಳೆದ 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇವೆ. ಆರೋಗ್ಯಯುತ, ಅಭಿವೃದ್ದಿ ಹಾಗೂ ವಿಶ್ವದಲ್ಲಿಯೇ ಮಹೋನ್ನತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಿವದರೊಂದಿಗೆ ಶ್ರಮಪಡಬೇಕಾಗಿದೆ ಎಂದ ಅವರು, ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಉತ್ತಮ. ಅವರೂ ಕೂಡ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ದೇಶದ ರಕ್ಷಣೆಯಲ್ಲಿ ನಾವು ಯಾವಗಲೂ ಸನ್ನದ್ದವಾಗಿರುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಬಲಿದಾನವನ್ನು ನಾವು ಮರೆಯುವಂತಿಲ್ಲ. ಅವರಿಂದಲೇ ಇಂದು ನಾವು ಜೀವಂತ ಮತ್ತು ಒಳ್ಳೆಯ ಜೀವನ ಸಾಗುಸುತ್ತಿದ್ದೇವೆ. ಲಕ್ಷಾಂತರ ಜನರು ಬಲಿದಾನ ಮಾಡಿದ್ದಾರೆ. ಅದರಲ್ಲಿ ನಮ್ಮ ಸಂಸ್ಥೆಯ ಕಾರ್ಯದ್ಯಕ್ಷರಾದ ಡಾ. ಕೋರೆ ಅವರ ತಂದೆ ಬಸವಪ್ರಭು ಕೋರೆ ಅವರೂ ಒಬ್ಬರು. ಕಳೆದ 25 ವರ್ಷಗಳಿಂದ ನಾವು ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತ ಈ ಭಾಗದ ಆರ್ಥಿಕ ಸಬಲತೆಗೆ ಸಹಕಾರ ಕೊಟ್ಟಿದ್ದೇವೆ. ಸಂತೃಪ್ತಿ, ಸಮೃದ್ದಿ ಜೊತೆಗೆ ಆರೋಗ್ಯ ಕಾಶಿ ಮಾಡಲು ಕಂಕಣಬದ್ದವಾಗಿ ಕಾರ್ಯ ನಿರ್ವಹಿಸುತ್ತ, ರೀತಿ ನೀತಿ, ಭೀತಿ, ಶಕ್ತಿ ಯುಕ್ತಿ, ಭಕ್ತಿಯಿಚಿದ ಸೇವೆ ಸಲ್ಲಿಸುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆ. ಬೆಳಗಾವಿ ಜಿಲ್ಲೆಯ ಮಧುಮೇಹ ಪೀಡಿತ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡಲಾಗುತ್ತಿದೆ ಎಂದು ವಿವರಿಸಿದರು.
ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್‌ಅನ್ನು ಬ್ರಿ. ಜಾಯದೀಪ ಮುಖರ್ಜಿ, ಫೋಕಸ್ ಸಂಚಿಕೆಯನ್ನು ಡಾ. ಪ್ರಭಾಕರ ಕೋರೆ, ಮಧುಮೇಹ ವೈದ್ಯ ಅನ್ನು ಉಪಕುಲಪತಿ ಡಾ. ವಿವೇಕ ಸಾವೋಜಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಡಾ. ವಿ ಡಿ ಪಾಟೀಲ, ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.










