ರಾಜಾರೋಷವಾಗಿ ಸಾಗಿದ ಅಕ್ರಮ ಮಧ್ಯ ಮಾರಾಟ ನಿದ್ದೆಗೆ ಜಾರಿದ ಅಬಕಾರಿ ಇಲಾಖೆ
- Krishna Shinde
- 14 Jan 2024 , 9:35 PM
- Koppal
- 493
ಗಂಗಾವತಿ:ನಗರದಲ್ಲಿನ ವಿವಿಧ ವಾರ್ಡ್ ಗಳ ಮನೆಯಲ್ಲಿ ಮತ್ತು ಸಣ್ಣ-ಪುಟ್ಟ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದಾರೆ. ಮಧ್ಯ ಮಾರಾಟ ಮಾಡುತ್ತಿರುವ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿ ಒಂದು ವಾರ ಕಳೆಯುತ್ತ ಬಂದರೂ ಕೂಡ ಇದುವರೆಗೆ ಅಬಕಾರಿ ಇಲಾಖೆಯವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುವ ನೋಡಿದರೆ ಜೊತೆ ಶಾಮಿಲ್ ಆಗಿರುವುದು ಅನುಮಾನ ಮೂಡಿ ಬರುತ್ತದೆ ಎಂದು ಹುಲ್ಲೇಶ್ ಕೊಜ್ಜಿ ಪತ್ರಿಕೆ ಹೇಳಿಕೆಯಲ್ಲಿ ಮಾತನಾಡಿದ್ದಾರೆ.

ಗಂಗಾವತಿ ನಗರದಲ್ಲಿನ ಕೆಲವೊಂದು ವಾರ್ಡ್ ಗಳಲ್ಲಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಉದಾಹರಣೆ ವಾರ್ಡ್ ನಂಬರ್ ೨೭ನೇ ಹರಿಜನವಾಡ್ ಹಿರೇಜಂತಕಲ್ ಏರಿಯಾದಲ್ಲಿ ಅಕ್ರಮ ಮದ್ಯದ ಅಂಗಡಿಗಳು, ಸಣ್ಣ-ಪುಟ್ಟ ಅಂಗಡಿಗಳಲ್ಲಿ ಮತ್ತು ಮನೆಯಲ್ಲಿ ಅಕ್ರಮವಾಗಿ ಮುದ್ಯ ಮಾರಾಟ ಮಾಡುತ್ತಿರುವುದರಿಂದ.

ರಸ್ತೆಯ ಮದ್ಯದಲ್ಲಿ ನಿಂತು ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ವಯಸ್ಕರರಲ್ಲದ ಮಕ್ಕಳು ಈ ಅಕ್ರಮ ಮಧ್ಯವನ್ನು ಕುಡಿದು ಪ್ರತಿದಿನ ವಿನಾಕಾರಣ ಜಗವಾಡುವುದು ಮತ್ತು ಸಾರ್ವಜನಿಕರನ್ನು ನಿಂದಿಸುವರು ಮಾಡುತ್ತಿದ್ದಾರೆ.
ಸಾಯಂಕಾಲ ಸಮಯದಲ್ಲಿ ಕೆಂಚಮ್ಮ ದೇವಸ್ಥಾನದ ಹತ್ತಿರ ಮತ್ತು ಅಖಂಡೇಶ್ವರ ದೇವಸ್ಥಾನದ ಹತ್ತಿರ ಕೂಡಿಕೊಂಡು ಕುಡಿಯುವುದು ಮತ್ತು ಗಲಭೆ ಮಾಡುವುದು ಮಾಡುತ್ತಿದ್ದಾರೆ ಮತ್ತು ಕುಡುಕರ ಹಾವಳಿಯಿಂದಾಗಿ ಇತ್ತೀನ ದಿನಗಳ ಹಿಂದೆ ಇಲ್ಲಿ ಜಗಳಗಳು ನಡೆದಿವೆ. ಬೇರೆ-ಬೇರೆ ಸಮುದಾಯಕ್ಕೆ ಘರ್ಷಣೆಗಳಾಗಿದೆ
ಮತ್ತು ನಮ್ಮ ವಾರ್ಡನಲ್ಲಿ ಎಲ್ಲಾ ಕಟ್ಟಡ ಕಾರ್ಮಿಕರು ಮತ್ತು ಕೃಷಿ ಕೂಲಿ ಕಾರ್ಮಿಕರಿದ್ದು, ಮನೆಯಲ್ಲಿನ ಹೆಣ್ಣಮಕ್ಕಳು ದುಡಿದುಬಂದು ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಹಾಗೂ ಕುಡಿತದಿಂದಾಗಿ ಬಡ ಹೆಣ್ಣುಮಕ್ಕಳನ್ನು ಹೊಡಿಯೋದು ಬಡಿಯೋದು ಮಾಡುತ್ತಿದ್ದಾರೆ.
ಇದರಿಂದಾಗಿ ನಮ್ಮ ವಾರ್ಡಿನಲ್ಲಿ ಸರ್ವಜನಿಕರಿಗೆ ನೆಮ್ಮದಿ ಇಲ್ಲದಂತೆಯಾಗಿದೆ, ಆದ್ದರಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತೆರವುಗೊಳಿಸಿ, ಅಕ್ರಮ ಮದ್ಯ ಮಾರಾಟ, ಮಾಡುವವರ ಮೇಲೆ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಅಬಕಾರಿ ಅಧಿಕಾರಿಗಳಿಗೆ ದಿನಾಂಕ:೦9-೦3-2023 ರಂದು ಸದರಿ ವಿಷಯದ ಬಗ್ಗೆ ದೂರ ಸಲ್ಲಿಸಿದರು ಕೂಡ, ಅಧಿಕಾರಿಗಳು ಇದುವರೆಗೂ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವವರ ಮೇಲೆ ಯಾವುದೇ ರೀತಿಯಾಗಿ ಕ್ರಮವನ್ನು ಕೈಗೊಂಡಿರುವುದಿಲ್ಲ ಅವರ ಮೇಲೆ ಕ್ರಮ ಕೈಗೊಳ್ಳದೆ ಇಷ್ಟು ದಿನ ವಿಳಂಬ ಮಾಡುತ್ತಿರುವುದು ನೋಡಿದರೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಜೊತೆ ತಾಲೂಕ ಅಬಕಾರಿಗಳು ಶಾಮಿಲ್ ಆಗಿರಬಹುದು ಮೇಲ್ನೋಟ ಕಂಡು ಬರುತ್ತದೆ ಎಂದು ಹುಲ್ಲೇಶ ಕೊಜ್ಜಿ ಪತ್ರಿಕೆ ಮೂಲಕ ಮೇಲೆಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದರು.
ಇನ್ನು ಒಂದು ವಾರದೊಳಗೆ ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಅಕ್ರಮವಾಗಿ ಮಧ್ಯ ಮಾರಾಟಗಾರರು ಮತ್ತು ಇವರಿಗೆ ಸಪ್ಲಾಯ ಮಾಡುವ ಅಂಗಡಿ ಮಾಲೀಕರ ವಿರುದ್ಧ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ನಮ್ಮ ಸಂಘಟನೆಯಿಂದ ಒತ್ತಾಯಿಸುತ್ತೇವೆ, ಒಂದು ವೇಳೆ ಇವರ ಮೇಲೆ ದೂರು ದಾಖಲಿಸದೇ ಇದ್ದಲ್ಲಿ ಮತ್ತು ಅಕ್ರಮವಾಗಿ ಮಧ್ಯಮಾರಟ ಮಾಡುತ್ತಿರುವವರನ್ನು ತೆರುಗೊಳಿಸಿ ಅಕ್ರಮ ಮಧ್ಯೆ ಮಾರಾಟ ಮಾಡುತ್ತಿರುವ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ವಿಳಂಬ ಮಾಡಿದಲ್ಲಿ ತಮ್ಮ ಇಲಾಖೆಯ ವಿರುದ್ಧ ನಮ್ಮ ಸಂಘಟನೆಯವರು ಮತ್ತು ಕೂಲ ಕಾರ್ಮಿಕರು ಜೊತೆಗೂಡಿ ಬೃಹತ್ ಮಟ್ಟದಲ್ಲಿ ಧರಣಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅಬಕಾರಿ ಅಧಿಕಾರಿಗಳಿಗೆ ಪತ್ರಿಕೆಯ ಮುಖಾಂತರ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹುಲೇಶ್ ಕೊಜ್ಜಿ ಹೇಳಿದ್ದಾರೆ
ವರದಿಗಾರರು ಅಬಕಾರಿ ಇಲಾಖೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ತಾಲೂಕ ಅಬಕಾರಿ ಹೇಳಿಕೆ
ತಾಲೂಕು ಅಬಕಾರಿ ಅಧಿಕಾರಿಗಳು ಹೇಳಿಕೆ ಆ ವಿಷಯದ ಬಗ್ಗೆ ನಾನು ಫೋನಿನಲ್ಲಿ ಮಾತಾಡಕ್ಕೆ ಆಗಲ್ಲ ನೀವು ಆಫೀಸ್ಗೆ ಬನ್ನಿ ಯಾರು ಕಂಪ್ಲೀಟ್ ಮಾಡಿದ್ದಾರೋ ಅವರನ್ನು ಕರೆದುಕೊಂಡು ಬನ್ನಿ ನಾನು ಅವಾಗ ಉತ್ತರ ಎಂದು ಉಡಾಫೆ ಉತ್ತರ ನೀಡಿದ ತಾಲೂಕ ಅಬಕಾರಿ ಅಧಿಕಾರಿಗಳು










