ರೈತ ಹೋರಾಟಗಾರ್ತಿ ಜಯಶ್ರೀ ನಿಧನ. ಸುಳಗಾದಲ್ಲಿ ಇಂದು ಅಂತ್ಯಕ್ರಿಯೆ

Listen News

ಬೆಳಗಾವಿ  :  ರೈತಪರ ಹೋರಾಟಗಾರ್ತಿ ಜಯಶ್ರೀ ಗುರನ್ನವರ ನಿಧರಾಗಿದ್ದು, ತಾಲೂಕಿನ ಸುಳಗಾ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ. 

Your Image Ad

ನಿನ್ನೆ ಸಾಯಂಕಾಲ ಖಾಸಗಿ ಆಸ್ಪತ್ರೆಯಲ್ಲಿ ಬ್ರೇನ್ ಹ್ಯಾಮರೇಜ್ ದಿಂದ ಮೃತಪಟ್ಟ ರೈತ ಮಹಿಳೆಯ ಮೃತ ದೇಹ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಇರಿಸಿ ರೈತಪರ ಹೋರಾಟಗಾರರು ಅಂತಿಮ‌ ನಮನ ಸಲ್ಲಿಸಿದರು, ನಂತರ ಬೃಹತ್ ಮೆರವಣಿಗೆಯ ಮೂಲಕ ಸುಳಗಾ ಗ್ರಾಮಕ್ಕೆ ಅಂತ್ಯಕ್ರಿಯೆ ಸಲುವಾಗಿ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. 

Your Image Ad

ವಿವಾಹದ ಕೇವಲ ಮೂರೇ ವರ್ಷದ ಅವಧಿಯಲ್ಲಿ ಗಂಡನನ್ನು ಕಳೆದುಕೊಂಡು ಓರ್ವ ಮಗನ ಜೊತೆ ಇದ್ದ ಜಯಶ್ರೀ ಅವರು ಕಳೆದ 15 ವರ್ಷಗಳಿಂದ ರೈತಪರ ಹೋರಾಟಗಳಲ್ಲಿ ಭಾಗವಹಿಸಿ ಸರ್ಕಾರಗಳಿಗೆ ಬಿಸಿ ಮುಟ್ಟಿಸಿ, ರೈತರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಜಯಶ್ರೀ ಅವರ ಅಗಲಿಕೆಯಿಂದ ಸಕಲ ರೈತ ಕುಲಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರೈತ ಮುಖಂಡರು ಕಂಬನಿ ಮಿಡದಿದ್ದಾರೆ.

Read More Articles