ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ನೀರು ಇಲ್ಲದೆ ಪರದಾಡುತ್ತಿರುವ ರೈತರು.

ಕಾಗವಾಡ : ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಕವಲಗುಡ್ಡ ಗ್ರಾಮದ ರೈತರು ಕಳೆದ ಹತ್ತು ಹನ್ನೆರಡು ದಿನಗಳಿಗೆ ಜನ ಹಾಗೂ ಜಾನುವಾರುಗಳಿಗೆ  ಕುಡಿಯಲು ನೀರು ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದ್ದ ಯಾವೊಬ್ಬ ಅಧಿಕಾರಿಗಳು ಇತ್ತ ನೋಡಿಯು ಇಲ್ಲ ಎಂದು ರೈತರು ತಮ್ಮ‌ ಅಳಲನ್ನು ತೊಡಿಕೊಂಡಿದ್ದಾರೆ.

promotions

 ಕವಲಗುಡ್ಡ ಗ್ರಾಮದ ನರಟ್ಟಿ ತೋಟದಲ್ಲಿ ಕೆಲವು ದಿನಗಳ ಹಿಂದೆ ಮಳೆ‌ ಗಾಳಿಗೆ ಹಲವು ವಿದ್ಯುತ್ ಕಂಬಗಳ ಮುರಿದು ಬಿದ್ದಿವೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು.

promotions

ಸಹ ಯಾವೊಬ್ಬ ‌ಅಧಿಕಾರಿಗಳು ನಮ್ಮ‌ ಸಮಸ್ಯೆ ಬಗೆಹರಿಸುವ ಗೋಜಿಗೆ ಹೊಗಿಲ್ಲಾ ಕಳೆದ ಎಂಟು ಹತ್ತು ದಿನಗಳಿಂದ ನಾವು ಹಾಗೂ ನಮ್ಮ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗಿದೆ ಸಮೀಪದಲ್ಲಿ ಎಲ್ಲು ಕುಡಿಯುವ ನೀರು ಇಲ್ಲ‌ ನೀರು ಬೇಕಾದರೆ ಮೂರನಾಲ್ಕು ಕೀ ಮಿ ಅಂತರದಿಂದ ನೀರು ತರಬೇಕಾದ ಪರಿಸ್ಥಿತಿ ಇದ್ದು ಹೊಲದಲ್ಲಿ ಬೆಳೆದ ಬೆಳೆ ನೀರು ಇಲ್ಲದೆ ಹಾಳಾಗಿತ್ತಿದೆ ಮಳೆನು ಈ ವರ್ಷ ಇನ್ನು ಆಗದಿರುವುದು ನಮಗೆ ಬಹಳ‌‌ ಸಮಸ್ಯೆ ಆಗಿದೆ ಎಂದು ರೈತ ಪರಶುರಾಮ ಭಂಡಗರ ತಮ್ಮ‌ ಅಳಲನ್ನು ತೊಂಡಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ರೈತ ನಿಂಗಪ್ಪ ನರಟ್ಟಿ ಪ್ರತಿ ಮನೆಯಲ್ಲಿ ಸುಮಾರು 8-10 ಜಾನುವಾರು ಸಾಕಿದ್ದೆವೆ ಅವುಗಳಿಗೆ ದಿನಂ ಪ್ರತಿ ನೀರು ತಂದು ಹಾಕುವುದೆ ನಮಗೆ ಕೆಲಸವಾಗಿದೆ ಬೆಳೆದ ಬೆಳೆ ನೀರು ಇಲ್ಲದೆ ವಣಗುತ್ತಿವೆ ಈ ಬಗ್ಗೆ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಹೇಳಿ ಪರಿ ಪರಿಯಾಗಿ ಬೇಡಿಕೊಂಡರು ಇಂದು ನಾಳೆ ಅನ್ನುತ್ತ ಕಾಲ ಕಳೆಯುತ್ತಿದ್ದಾರೆ ಗಾಳಿಯಂದ ಬಿದ್ದ ಕಂಬ  ಹಾಗೇ ಇದ್ದು ಅದರ ತಂತಿ ಕೂಡಾ ಹೊಲದಲ್ಲಿ ಹಾಗೆ ಬಿದ್ದಿದ್ದು ಆದಷ್ಟು ಬೇಗ ಅದನ್ನು ಸರಿಪಡಿಸಿ ನಮಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕು ಇಲ್ಲವಾದಲ್ಲಿ ನಮ್ಮ ಜಾನುವಾರುಗಳ ಸಹಿತ ಐನಾಪೂರ ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು.

 ಈ ವೇಳೆ ರೈತರಾದ ದುಂಡಪ್ಪ‌ ತುಗಶೆಟ್ಟಿ,ನಿಂಗಪ್ಪ ನರಟ್ಟಿ,ಮುರಗೆಪ್ಪ ನರಟ್ಟಿ,ರಮೇಶ ಸಂಬೋಜಿ,ಭೀಮರಾವ್ ಪಾಟೀಲ, ಪರಶುರಾಮ‌ ಭಂಡಗರ,ಸತ್ಯಪ್ಪ ನರಟ್ಟಿ,ಪ್ರಕಾಶ ನರಟ್ಟಿ,ಇದ್ದರು. 

ವರದಿ : ರಾಹುಲ್ 

Read More Articles