ಪ್ರತಿದಿನ 7 ಘಂಟೆ ವಿದ್ಯುತ್ ಪೂರೈಕೆಗೆ ರೈತರ ಒತ್ತಾಯ....!
- 12 Jan 2024 , 6:21 PM
- Belagavi
- 124
ಅಥಣಿ :ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಯಲ್ಲಮ್ಮನವಾಡಿ ವಿದ್ಯುತ್ ಪ್ರಸರಣ ನೇಮಿತ 110/10 ಕಿವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಎರಡು-ಮೂರು ವಾರಗಳಿಂದ ಗ್ರಾಮಗಳಿಗೆ ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿದ್ದಾರೆ ಇದರಿಂದ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ, ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ ನಮ್ಮ ಗ್ರಾಮಗಳಿಗೆ ಕಡ್ಡಾಯವಾಗಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ರೈತ ಸಮುದಾಯದವರು ಆಗ್ರಹಿಸಿದರು.

ನಂತರ ಅಧಿಕಾರಿಯೊಂದಿಗೆ ಮಾತನಾಡಿದ ರೈತ ಮುಖಂಡ ರಾವಸಾಬ ಜಗತ್ತಾಪ, ಕೊಕಟನೂರ, ಸುಟ್ಟಟ್ಟಿ, ಝುಂಜರವಾಡ, ಧಬಧಬಹಟ್ಟಿ, ಕೊಡಗಾನೂರ, ಕಟಗೇರಿ,ಬುರ್ಲಟ್ಟಿ, ಯಲ್ಲಮ್ಮವಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಎಲ್ಲಾ ಹಳ್ಳಿಯ ರೈತರಿಗೆ 3 ಪಿಸ್ 7 ಘಂಟೆ ಪುರೈಕೆ ಮಾಡಬೇಕು ಹಾಗೆ 2 ಪಿಸ್ ಸಾಯಂಕಾಲ 6 ಘಂಟೆಯಿಂದ ಮುಂಜಾನೆ 6 ಘಂಟೆವರೆಗೆ ಎಲ್ಲ ಗ್ರಾಮದ ರೈತರಿಗೆ ಪೂರೈಕೆ ಮಾಡಬೇಕು ಎಂದರು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ, ವಿಷಯ ತಿಳಿದ್ದು ಅಥಣಿ ಹೆಸ್ಕಾಂ ಸಹಾಯಕ ಅಭಿಯಂತರಾದ ವಿಜಯಕುಮಾರ್ ಕೋಲೆ ಹಾಗೂ ಐಗಳಿ ಪೊಲೀಸ್ ಠಾಣೆಯ ಪಿಎಸ್ಐ ಶಿವಾಜಿ ಪವಾರ ಹಾಗೂ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗಾರರನ್ನು ಮನವೊಲಿಸಲು ಯತ್ನಿಸಿದ್ದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಬಿಡಲಿಲ್ಲ.ಇದೇ ವೇಳೆಯಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಪತಿ ಮಹೇಶ ಕಾಡದೇವರಮಠ,ರೈತರ ಮುಖಂಡರಾದ ಜಗದೀಶ್ ಮರೆಗುದ್ದಿ, ಆದಿನಾಥ ನ್ಯಾಮಗೌಡ, ರಾವಸಾಬ್ ಜಗತಾಪ, ಅಣ್ಣಪ್ಪ ಅಡಹಳ್ಳಿ, ಸಂಜು ಮಾದರ, ಸುಭಾಸ್ ಮಾದರ ಹಾಗೂ ಯುವಕರ ಅರುಣ ಮುದಕಣ್ಣವರ, ಚೇತನ್ ದೇಸಾಯಿ,ರಾಶೀದ ಶೇಖ ಮತ್ತು ಗ್ರಾಮದ ರೈತ ಸಮುದಾಯದವರು ಉಪಸ್ಥಿತರಿದ್ದರು.










