ಹಲ್ಯಾಳ ಕೃಷ್ಣ ಸಕ್ಕರೆ ಕಾರ್ಖಾನೆ ವಿರುದ್ದ ಪ್ರತಿಭಟಿಸಿದ ರೈತ ಸಂಘಟನೆ
- 14 Jan 2024 , 5:39 AM
- Belagavi
- 173
ಅಥಣಿ :ತಾಲೂಕಿನ ಹಲ್ಯಾಳ ಕೃಷ್ಣ ಸಕ್ಕರೆ ಕಾರ್ಖಾನೆಯ ವಾರ್ಷಿಕ ವರದಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಥಣಿ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷರಾದ ಮಹದೇವ್ ಮಡಿವಾಳ ಎಚ್ಚರಿಕೆ ನೀಡಿದ್ದಾರೆ

ಸುಮಾರು 18000 ಸೇರುಗಳನ್ನು ಹೊಂದಿರುವ ಕೃಷ್ಣ ಸಕ್ಕರೆ ಕಾರ್ಖಾನೆ ಆಡಳಿತವು ತಮ್ಮ ಕಾರ್ಖಾನೆಯ ಮುಚ್ಚಿ ಹಾಕಲು ಈ ರೀತಿ ಕ್ರಮವನ್ನು ಮಾಡುತ್ತಿದ್ದೆ ಸುಮಾರು ರೈತರ ಕಡೆ ಆಂಡ್ರಾಯ್ಡ್ ಮೊಬೈಲ್ ಇರುವುದಿಲ್ಲ ಹಾಗೂ ಒಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಯಾರೇ ಪ್ರಶ್ನೆ ಕೇಳಿದರು ಅವರಿಗೆ ಸ್ಪಷ್ಟ ಉತ್ತರ ಕೊಡುವುದಿಲ್ಲ ಆದ್ದರಿಂದ ವಿಡಿಯೋ ಕಾನ್ಫರೆನ್ಸ್ ಅನ್ನು ರದ್ದು ಮಾಡಬೇಕೆಂದು ಈ ವೇಳೆ ನಮ್ಮ ಮಾಧ್ಯಮ ಮುಖಾಂತರ ಒತ್ತಾಯಿಸಿದರು











