ಕಾಲುವೆ ನೀರು ಬಾರದ ಕಾರಣಕ್ಕೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ ರೈತರು.
- Shivaraj Bandigi
- 15 Jan 2024 , 4:11 AM
- Belagavi
- 565
ಅಥಣಿ: ಕೆನಾಲ್ ಕಾಲುವೆಗಳಿಗೆ ನೀರು ಬಾರದ ಕಾರಣಕ್ಕೆ ಐಗಳಿ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ ರೈತರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊನೆಯ ಹಳ್ಳಿಗಳಿಗಳಿಗೆ ಕರಿ ಮಸೂತಿ ಏತ ನೀರಾವರಿ ಯೋಜನೆಯಿಂದ ನೀರು ಬಾರದ ಕಾರಣಕ್ಕೆ ಐಗಳಿ ಕ್ರಾಸ್ ನಲ್ಲಿ ಮಹಾತ್ಮಾ ಗಾಂದಿಜಿ ಪೊಟೊ ಇಟ್ಟು ಅಥಣಿ ವಿಜಯಪೂರ ರಾಜ್ಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ ನಡೆಸಿದ್ದಾರೆ.

ಅಥಣಿ ತಾಲೂಕಿನ ಕೊನೆಯ ಹಳ್ಳಿಗಳಾದ ಐಗಳಿ, ಕೊಕಟನೂರ, ಬಾಡಗಿ ಗ್ರಾಮಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಾಲುವೆಗಳಿಗೆ ನೀರು ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟಿಸುತ್ತಿರುವ ರೈತರ
ಈ ಕುರಿತು ಈಗಾಗಲೇ ಹಲವು ಬಾರಿ ನೀರಾವರಿ ಇಲಾಖೆಯ ಅಧಿಕಾರಿಗಳಿ ಮನವಿ ಮಾಡಿದರೂ ಯಾವುದೆ ರೀತಿಯ ಪ್ರಯೋಜನವಾಗಿಲ್ಲ ಬರಗಾಲದಿಂದ ತತ್ತರಿಸಿದ ರೈತರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ ನೀರು ತಲುಪಿಸುವವರೆಗೆ ಹೋರಾಟ ಕೈಬಿಡಲ್ಲ ಎಂದು ಪಟ್ಟುಹಿಡಿದಿರುವ ರೈತರು










