ಚಿಕ್ಕಟಿ ಗ್ರಾಮದಲ್ಲಿ ಕರೆಂಟ್ ಶಾಕ್ ತಗುಲಿ ತಂದೆ ಮತ್ತು ಮಗ ಸಾವು
- shivaraj bandigi
- 15 Jan 2024 , 6:08 AM
- Belagavi
- 770
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟಿ ಗ್ರಾಮದಲ್ಲಿ ಕರೆಂಟ್ ಶಾಕ್ ತಗುಲಿದ ಪರಿಣಾಮ ತಂದೆ ಮತ್ತು ಮಗ ಇಬ್ಬರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಜರುಗಿದ್ದು, ಮೃತ ತಂದೆ ಮಲ್ಲಿಕಾರ್ಜುನ ಸದಾಶಿವ ಪೂಜಾರಿ

(32) ವರ್ಷ ಹಾಗೂ ಮಗ ಪ್ರೀತಮ ಮಲ್ಲಿಕಾರ್ಜುನ ಪೂಜಾರಿ (6) ವರ್ಷ ಎಂದು ತಿಳಿದುಬಂದಿರುತ್ತದೆ.

ಕೃಷಿ ಕುಟುಂಬದವರಾದ ಮಲ್ಲಿಕಾರ್ಜುನ ಮದ್ಯಾನ ಗದ್ದೆಯಯಲ್ಲಿದ್ದ ಪಂಪ್ ಸೆಟ್ ಬಂದ್ ಮಾಡಲು ಹೋದಾಗ ಗದ್ದೆಯ ರಸ್ತೆ ಮದ್ಯ ಕೇಬಲ್ ಕಟ್ಟಾಗಿದ್ದ ಜಾಗದಲ್ಲಿ ತೇವಾಂಶ ವಿದ್ದ ಕಾರಣ ವಿದ್ಯುತ್ ತಗುಲಿದೆ
ವಿದ್ಯುತ್ ಶಾಕ್ ನಿಂದ ತಂದೆ ಹಾಗೂ ಆರು ವರ್ಷದ ಪುಟ್ಟ ಮಗು ಸ್ಥಳದಲ್ಲೆ ಸವಣ್ಣಪಿದ ಹೃದಯವಿದ್ರಾವಕ ಘಟನೆ ನಡೆದಿದೆ ಬಾಲಕ ಅಥಣಿಯ ಶಾರದಾ ಮಾತಾ ಶಾಲೆಯಲ್ಲಿ ಒಂದನೆ ತರಗತಿಯಲ್ಲಿಯಲ್ಲಿ ಓದುತಿದ್ದ ಎಂದು ತಿಳಿದುಬಂದಿದೆ ಈ ಸಂಭಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ತಂದೆ ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.










