ಸಿದ್ದಸಿರಿ ಸಕ್ಕರೆ ಕಾರ್ಖಾನೆಗೆ ಅನುಮತಿ ನೀಡದಿದ್ದರೆ ಉಗ್ರ ಹೋರಾಟ ! ಪಂಚಮಸಾಲಿ ಲಿಂಗಾಯತರಿಂದ ಎಚ್ಚರಿಕೆ

ಬೆಳಗಾವಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಒಡೆತನದ ಶ್ರೀ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಮತ್ತು ಏಥೆನಾಲ್ ಘಟಕಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ತಕ್ಷಣವೇ ಅನುಮತಿ ಪತ್ರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಪಂಚಮಸಾಲಿ ಲಿಂಗಾಯತ ಸಮುದಾಯ ಎಚ್ಚರಿಕೆ ನೀಡಿದೆ‌ 

promotions

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಸೆಪ್ಟಂಬರ್ 25 ರೊಳಗಾಗಿ ಅನುಮತಿ ನೀಡಲೇಬೇಕು ಎಂದರಲ್ಲದೆ, ಅಧಿಕಾರಿಗಳು ರಾಜಕೀಯ ಬಿಟ್ಟು ಕಾನೂನಿನ ಪ್ರಕಾರ ನಡೆದುಕೊಳ್ಳಲಿ ಎಂದರು. 

promotions

 25 ರೊಳಗೆ ಅನುಮತಿ ನೀಡದಿದ್ದರೆ ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಆಕ್ರೋಶ ವ್ಯಕ್ತಪಡಿಸಿದರು‌ 

ಬೆಳಗಾವಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ಸಹಕಾರಿ ಸಕ್ಕರೆ ಸಂಸ್ಥೆಗಳ ರೈತ ಘಟಕದ ರಾಜ್ಯಾಧ್ಯಕ್ಷ ರಾಜು ಕುಡಸೋಮಣ್ಣವರ, ಬೆಳಗಾವಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ಗುಂಡು ಪಾಟೀಲ, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಬಸವ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಶಿವಾನಂದ ಬಡ್ಡಿಮನಿ, ಬೆಳಗಾವಿ ಲಿಂಗಾಯತ ಪಂಚಮಸಾಲಿ ನಗರ ಘಟಕ ಅಧ್ಯಕ್ಷ ಶಿವಾನಂದ ತಂಬಾಕೆ, ಬೆಳಗಾವಿ ಜಿಲ್ಲೆಯ ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಉಪಸ್ಥಿತರಿದ್ದರು.

Read More Articles