ಜನಪದ ಗಾಯಕ ಶಬ್ಬಿರ್ ಡಾಂಗೆ ಹಾಡಿನ ವೀಡಿಯೋ ವೈರಲ್ ಕರಿಮಣಿ ಮಾಲೀಕ ನಾನಲ್ಲಂತಿ... ಅಂತೂ... ಇಂತೂ... ಮುಗಸಾಕ... ನಿಂತಿ... ನೀ ನನ್ನ ಸಂತಿ...!

ಜನಪದ ಗಾಯಕ ಶಬ್ಬಿರ್ ಡಾಂಗೆ ಹಾಡಿನ ವೀಡಿಯೋ ವೈರಲ್ ಕರಿಮಣಿ ಮಾಲೀಕ ನಾನಲ್ಲಂತಿ... ಅಂತೂ... ಇಂತೂ... ಮುಗಸಾಕ... ನಿಂತಿ... ನೀ ನನ್ನ ಸಂತಿ...!

'ಕರಿಮಣಿ ಮಾಲೀಕ ಉಪೇಂದ್ರ ರಚಿಸಿದ ಹಾಡು ದಿನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡಿಂಗ್‌ ನಲ್ಲಿದೆ. ಇಂದು ಎಲ್ಲಿ ನೋಡಿದಲ್ಲಿ ಯೂ ಟ್ಯೂಬ್, ಫೇಸ್‌ ಬುಕ್, 'ಕರಿಮಣಿ ಮಾಲೀಕ ನದ್ದೆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಬೆನ್ನ ಹಿಂದೆ ಬೆಳಗಾವಿ ಜಿಲ್ಲೆ, ಮೂಡಲಗಿ ಪಟ್ಟಣದ ಖ್ಯಾತ ಶಬ್ಬಿರ್ ಡಾಂಗೆ ರಚಿಸಿ ಹಾಡಿರುವ 'ಕರಿಮಣಿ ಮಾಲೀಕ ನಾನಲ್ಲಂತಿ... ಅಂತೂ ಇಂತೂ ಮುಗಸಾಕ... ನಿಂತಿ ನೀ ನನ್ನ ಸಂತಿ' ಎಂಬ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ದಿನಬೆಳಗಾಗುವುದರಲ್ಲಿ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ ಗಳು, ಕಮೆಂಟ್ ಗಳನ್ನು ಪಡೆದುಕೊಂಡುಬಿಟ್ಟಿದೆ.

'ಓ... ನಲ್ಲಾ ನೀನಲ್ಲಾ

ಕರಿಮಣಿ ಮಾಲೀಕ ನೀನಲ್ಲ' ಎಂಬ ಹಾಡನ್ನು ಖ್ಯಾತ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ರಚಿಸಿದ್ದು. ಇದಕ್ಕೆ ಸಂಗೀತ ಸಂಯೋಜನೆ ಗುರುಕಿರಣ್ ಮಾಡಿದ್ದಾರೆ. ಆದರೆ ಈ

ನೀನಲ್ಲ' ಎಂಬ ಇತ್ತೀಚಿಗೆ ದಿನದಿಂದ ಹಾಡು ಬಹಳಷ್ಟು ಟ್ರೆಂಡ್ ಮಾಡಿ, ಅನೇಕ ಅನಾಹುತಗಳನ್ನು ಸೃಷ್ಟಿಸಿತ್ತು. ಅನೇಕ ಹದಿಹರೆಯದ ವಿವಾಹಿತ ತರುಣ-ತರುಣಿ ಯರು ಪ್ರೇಮಿಸಿ 'ಕರಿಮಣಿ ಮಾಲೀಕ ನೀನಲ್ಲಾ' ಎಂದು ಓಡಿ ಹೋಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಅನೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಒಟ್ಟಿನ ಮೇಲೆ 'ಕರಿಮಣಿ ಮಾಲೀಕ ನೀನಲ್ಲಾ ಎಂಬುದು ಸಿಕ್ಕಾಪಟ್ಟೆ ವೈರಲ್ ಆದ ಬೆನ್ನ ಹಿಂದೆ ಅನೇಕ ಜನಪದ ಹಾಡುಗಳು ಹುಟ್ಟಿಕೊಂಡು ಸಾಕಷ್ಟು ಟ್ರೆಂಡ್ ಮಾಡಿವೆ. ಜನಪದ ಗಾಯಕ ಜನಪದ ಹಾಡು

ಜನಪದ ಗಾಯಕ ಶಬ್ಬಿರ್ ಡಾಂಗೆ

ಕರಿಮಣಿ ಮಾಲೀಕ ನಾನಲ್ಲಂತಿ... ಉತ್ತರ ಕರ್ನಾಟಕದ ಪ್ರಮುಖ ಜನಪದ ಗಾರುಡಿಗ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಶಬ್ಬಿರ್ ಡಾಂಗೆ ಸ್ವಂತಃ ಹಾಡು ರಚಿಸಿ 'ಕರಿಮಣಿ ಮಾಲೀಕ ನಾನ ಲ್ಲಂತಿ ಅಂತೂ... ಇಂತೂ ಮೂಗಸಾಕ ನಿಂತಿ... ನೀ ನನ್ನ ಸಂತಿ' ಹಾಡಿದ್ದಾರೆ. ಹಾಡಿನಲ್ಲಿ ಸಮಾಜದ ತರುಣ- ತರುಣಿಯರಿಗೆ ಅದ್ಭುತವಾದ ಕಿವಿಮಾತುಗಳಿವೆ. ಗಾಯಕ ಶಬ್ಬಿರ್ ಹಾಡು ಇಂದು ಯೂಟ್ಯೂಬ್ ಮತ್ತು ಇನ್ ಸ್ಟಾಗ್ರಾಂಗಳಲ್ಲಿ ಲಕ್ಷಾಂತರ ವೀಕ್ಷಣೆ ಮತ್ತು ಲೈಕ್ ಗಳನ್ನು, ಕಮೆಂಟ್ ಗಳನ್ನು ಕಂಡಿದೆ. ಹಾಡು ರಚನೆಯಾದ ಎರಡೇ

ದಿನಗಳಲ್ಲಿ 'ಕರಿಮಣಿ ಮಾಲೀಕ ನಾನಲ್ಲಂತಿ' ಎಂಬ ಗುಣು... ಗುಣಿಸುವ ಸದ್ದು ಪಡ್ಡೆ ಹುಡುಗರಿಂದ ಹಿಡಿದು ವಯಸ್ಸಾದವರ ಬಾಯಲ್ಲಿ ಕೇಳಿಬರುತ್ತಿದೆ.

ಕ್ರಿಯೇಟಿವ್ ಕಂಟೆಂಟ್ ಇತ್ತೀಚಿಗೆ ಯಾವುದಾದರೂ ಉತ್ತಮ ಕ್ರಿಯೇಟಿವ್ ಕಂಟೆಂಟ್ ಗಳಿದ್ದರೆ, ಅಂತಹ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಸಾಕು ವೈರಲ್ ಆಗಿಬಿಡು ತ್ತವೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ದಿಢೀರನೆ ಜನ ಪ್ರಿಯರಾದವರಲ್ಲಿ ಜನಪದ ಹಾಡುಗಾರ ಉತ್ತರ ಕರ್ನಾಟಕದ ಶಬ್ಬಿರ್ ಡಾಂಗೆ ಪ್ರಮುಖರೆಂದು ಹೇಳಬಹುದು. ಇವರ ಜನಪದ ಹಾಡಿಗೆ ಲಕ್ಷಾಂತರ ನೆಟ್ಟಿಗರು ಮನಸೋತಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಜನಪದ ಸೊಗಡಿನ ಗೀತೆಯನ್ನು ತಮ್ಮ ಕಂಚಿನ ಕಂಠದಿಂದ ಹಾಡುವ ಮೂಲಕ

ಸುದ್ದಿಯಲ್ಲಿದ್ದಾರೆ. ಇಂದು ಜಾಗತೀಕರಣದ ಪ್ರಭಾವದಿಂದಾಗಿ ಜೀವನದ ಮೌಲ್ಯವನ್ನು ಪಸರಿಸುವಂತಹ ಅರ್ಥ ಗರ್ಭಿತವಾದ ಜನಪದ ಗೀತೆಗಳು ಕಣ್ಮರೆಯಾಗುವ ಇಂತಹ ಸಂದರ್ಭದಲ್ಲಿ ಜನಪದ ಗಾಯಕ ಶಬ್ಬಿರ್ ಅವರ ಕಂಠಸಿರಿಯಲ್ಲಿ ಮೂಡಿ ಬಂದ 'ಕರಿಮಣಿ ಮಾಲೀಕ ನಾನಲ್ಲಂತಿ' ನೆಟ್ಟಿಗರ ಮನ ಗೆದ್ದಿದೆ. ಈ ಹಿಂದೆಯೂ ಕೂಡಾ 'ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ' ಎಂಬ ಜನಪದ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟಿ ಸದ್ದು ಮಾಡಿತ್ತು.

ಕರಿಮಣಿ ಮಾಲೀಕ ಹವಾ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪೇಂದ್ರ ಚಿತ್ರದ 'ಕರಿಮಣಿ ಮಾಲೀಕ ನೀನಲ್ಲ' ಹಾಡು ಸೆನ್ಸೆಷನ್ ಕ್ರಿಯೇಟ್ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಹಾಡಿನದ್ದೇ ಹವಾ. ಈ ನಡುವೆ ಕರಿಮಣಿ ಮಾಲೀಕನ ಉತ್ತರ ಕರ್ನಾಟಕದ ಶೈಲಿಯ ಜಾನಪದ ಸೊಗಡಿನ ಹಾಡೊಂದು ಫುಲ್ ವೈರಲ್ ಆಗಿದೆ.

ಎಲ್ಲೆಡೆಗೆ ಶಬ್ಬಿರ್ ಹಾಡು ವೈರಲ್

ವೈರಲ್ ರೀಲ್ ವಿಡಿಯೋದಲ್ಲಿ ಗಾಯಕ ಶಬ್ಬಿರ್ ಡಾಂಗೆ ಅವರು ಹಾಡಿರುವ 'ಕರಿಮಣಿ ಮಾಲೀಕ ನಾನ ... ... ... .... ಕರಿಮಣಿ ಮಾಲೀಕನ ಬದಲಿಸ ಬೇಕಂತಿ. ಎಷ್ಟು ದಿನದಿಂದ ಇಂತಾ ಹೊಂಚಾಕಿ ಕುಂತಿ...' ಎಂಬ ಜನಪದ ಹಾಡು ಇದೀಗ ಪುಲ್ ವೈರಲ್ ಆಗಿದೆ. ನೆಟ್ಟಿಗರು ಲಕ್ಷಾಂತರ ಸಂಖ್ಯೆಯಲ್ಲಿ ಕರಿಮಣಿ ರೀಲ್ಸ್ ಗೆ ಅಭಿನಂದಿಸಿದ್ದಾರೆ ಮತ್ತು ಮೆಚ್ಚುಗೆ ಸೂಚಿಸಿದ್ದಾರೆ. ಇವರ ಸಾವಿರಾರು ಜನಪದ ಹಾಡುಗಳು ಉತ್ತರ ಕರ್ನಾಟಕದ ತುಂಬ ಮನೆ ಮಾತಾಗಿವೆ.

ವರದಿ : ಮನ್ನಾಪೂರ

Read More Articles