ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ದಿಗೆ ಬದ್ದ! ಸವಿತಾ ಅಮರಶೆಟ್ಟಿ

ಧಾರವಾಡ : ರಾಜ್ಯದ ಅಭಿವೃದ್ದಿಗೆ ಲಿಂಗಾಯತ ಸಮೂದಾಯ ಅಪಾರ ಕೊಡುಗೆ ನೀಡಿದೆ ಎಂದು ಧಾರವಾಡದ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು  ಮಹಿಳಾ ಸದಸ್ಯೆಯಾಗಿ ಆಯ್ಕೆಯಾದ ಸವಿತಾ ಅಮರಶೆಟ್ಟಿ ಹೇಳಿದರು. 

promotions

 ಅವರು ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ  ಲಿಂಗಾಯತ ಸಮುದಾಯದ ಜನರಿದ್ದು, ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನನಗೆ ಅತಿ ಹೆಚ್ಚು ಮತಗಳನ್ನು ನೀಡಿ ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

promotions

ನನ್ನ ಈ ಹೊಸ ಜವಾಬ್ದಾರಿಯು ನನಗೆ ಇನ್ನೂ ಹೆಚ್ಚಿನ ಬಲ ತಂದುಕೊಟ್ಟಿದ್ದು, ಬರುವ ದಿನಗಳಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯೆಯಾಗಿ ಲಿಂಗಾಯತ ಸಮೂದಾಯದ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು. 

ಜುಲೈ 21 ರಂದು ನಡೆದ ಚುನಾವಣೆಯಲ್ಲಿ ಮಹಿಳಾ ಕೋಟಾದಡಿ ಸ್ಪರ್ಧಿಸಿದ್ದ ಸವಿತಾ ಅಮರಶೆಟ್ಟಿ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಗಮದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. .ಇವರನ್ನು ಹುಬ್ಬಳ್ಳಿಯ  ಮೂರು ಸಾವಿರ ಮಠದಲ್ಲಿ  ಹೊರಕೇರಿ ಕುಟುಂದವರು  ಸನ್ಮಾನಿಸಿ ಶುಭ ಹಾರೈಸಿದರು.

ವರದಿ  : ರವಿಕಿರಣ್  ಯಾತಗೇರಿ

Read More Articles