ರಾಜ್ಯೋತ್ಸವದಲ್ಲಿ ಡಾಲ್ಬಿಗೆ ಅವಕಾಶ ಕೊಡುವಂತೆ ಒತ್ತಾಯ

ಬೆಳಗಾವಿ: ರಾಜ್ಯೋತ್ಸವದಲ್ಲಿ ಧ್ವನಿ ವರ್ಧಕಗಳ ಬಳಕೆಗೆ ನಿರ್ಬಂಧ ಹಾಕಿದ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ಬೆಳಗಾವಿ ರಾಜ್ಯೋತ್ಸವ ಯುವಕ ಮಂಡಳಿಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

promotions

ಬೆಳಗಾವಿಯಲ್ಲಿ ಆಚರಿಸುವ ಕರ್ನಾಟಕ ರಾಜ್ಯೋತ್ಸವ ಐತಿಹಾಸಿಕವಾಗಿದೆ. ಬೆಳಗಾವಿ ಗಡಿ ಭಾಗವಾಗಿರುವುದರಿಂದ ಕನ್ನಡಿಗರ ಸ್ವಾಭೀಮಾನದ ಗುರುತಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

promotions

ಇದಕ್ಕೆ ವಿರುದ್ಧವಾಗಿ ಪ್ರಚೋದನೆ ನೀಡುವಂತೆ ಪ್ರತಿ ವರ್ಷ ಜಿಲ್ಲಾಡಳಿತದ ಆದೇಶದ ವಿರುದ್ಧ ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ಕರಾಳ ದಿನ ಆಚರಿಸುತ್ತದೆ.

ಅವರ ವಿರುದ್ಧ ಕ್ರಮ ಕೈಗೊಂಡು ಈ ಬಾರಿಯ ರಾಜ್ಯೋತ್ಸವಕ್ಕೆ ಧ್ವನಿ ವರ್ಧಕಗಳ ಬಳಕೆಯ ನಿಷೇಧದ ಆದೇಶ ಹಿಂಬಪಡೆಯಬೇಕೆಂದು ಒತ್ತಾಯಿಸಿದರು. ಸಂಪತ್ತ ಕುಮಾರ ದೇಸಾಯಿ, ವಾಜೀಸ ಹಿರೇಕುಡಿ, ಕಸ್ತೂರಿ ಭಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles