ಮತದಾರರಿಗೆ ಉತ್ತರಿಸಲು ಒತ್ತಾಯ. ಮಂಡಲ ಬಿಜೆಪಿ ವತಿಯಿಂದ ಶಾಸಕರಿಗೆ ಮನವಿ
- shivaraj bandigi
- 10 Feb 2024 , 4:55 PM
- Belagavi
- 560
ಬೈಲಹೊಂಗಲ : ಸರ್ಕಾರದಿಂದ ಮತಕ್ಷೇತ್ರದ ಅಭಿವೃದ್ದಿಗೆ ಒದಗಿಸಿದ ಅನುದಾನ, ಅಭಿವೃದ್ದಿಪರ ಯೋಜನೆಗಳ ಜಾರಿ ಕುರಿತು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾರ್ಗದರ್ಶನದಲ್ಲಿ ಬೈಲಹೊಂಗಲ ಬಿಜೆಪಿ ಮಂಡಲದ ಪದಾಧಿಕಾರಿಗಳು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಿದರು.

ತಮ್ಮ ಆಯ್ಕೆಯ ನಂತರಕ್ಷೇತ್ರಕ್ಕೆ ತಂದ ಅನುದಾನ, ಸದರಿ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವವು ಎಂಬುದರ ಕುರಿತು ಮನವಿ ಸಲ್ಲಿಸಲಾಗಿದೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಮಾಧ್ಯಮದ ಜೊತೆ ಮಾತನಾಡಿ, ಶಾಸಕರು ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿರುವ ಅನುದಾನ ವಿವರ ಹಾಗೂ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ಒದಗಿಸಿ, ಚುನಾವಣೆಯ ಸಂದರ್ಭದಲ್ಲಿ ತಮ್ಮ ಮೇಲೆ ಭರವಸೆಯಿಟ್ಟು ಕ್ಷೇತ್ರದ ಮತದಾರರು ತಮ್ಮನ್ನು ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ತಾವು ಶಾಸಕರಾಗಿ 1 ವರ್ಷ ಪೂರೈಸುವ ಹೊಸ್ತಿಲಲ್ಲಿದ್ದೀರಿ. ನಮಗೆ ತಿಳಿದಂತೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ, ಆ ಕಾರಣದಿಂದ ಈ ಪತ್ರದ ಮೂಲಕ ತಮಗೆ ಈ ಕೆಳಕಂಡ ಪ್ರಶ್ನೆಗಳ ಮೂಲಕ ಉತ್ತರವನ್ನು ಬಯಸುತ್ತಿದ್ದೇವೆ ಎಂದರು, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಮಾತನಾಡಿ, ಈ ಪತ್ರದ ಉದ್ದೇಶ ತಮಗೆ ಮುಜುಗರ ಉಂಟುಮಾಡುವುದಲ್ಲ, ಬದಲಾಗಿ ಮತ ಕೊಟ್ಟ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಿದ್ದು, ಪ್ರಶ್ನಿಸುವ ಹಕ್ಕು ಮತದಾರರಿಗಿರುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರ ಧ್ವನಿಯಾಗಿ ಈ ಪತ್ರ ಬರೆದಿದ್ದೇವೆ ಎಂದರು,
ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಗದೀಶ ಬೂದಿಹಾಳ, ಮಂಡಲ ಉಪಾಧ್ಯಕ್ಷ ಸುಭಾಸ್ ತುರಮರಿ, ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರ್ಗಿ, ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಪ್ರಶಾಂತ ಅಮ್ಮಿನಭಾವಿ, ಜಿಲ್ಲಾ ಕೋಶಾಧ್ಯಕ್ಷ ಸಚೀನ ಕಡಿ, ಗೌಡಪ್ಪ ಹೊಸಮನಿ, ನವೀನ ತುರಮರಿ, ಶ್ರೀಕಾಂತ ಬೂದಿಹಾಳ ಭಾಜಪಾ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










