ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆಗೆ ಅನುಮೊದನೆ ನೀಡಲು ಒತ್ತಾಯ

ಬೆಳಗಾವಿ : 19 ಡಿಸೆಂಬರ್  2022 ರಿಂದ ಚಳಿಗಾಲದ ಅಧಿವೇಶನ ಜರುಗುತ್ತಿದ್ದು ಸದಾ ನ್ಯಾಯಕ್ಕಾಗಿ ಶೋಷಿತಿಪರವಾಗಿ ಹೊರಾಡುವ ನ್ಯಾಯವಾದಿಗಳಿಗೆ ಸಂರಕ್ಷಣೆ ಇಲ್ಲದಂತಾಗಿದೆ. 

promotions

ಇತ್ತೀಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆಗಳು ಬಹಳ ಪ್ರಮಾಣದಲ್ಲಿ ನಡೆಯುತ್ತಿವೆ. ಕೆಲವು ನ್ಯಾಯವಾದಿಗಳು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುತ್ತಾರೆ. ನ್ಯಾಯಕ್ಕಾಗಿ ಹೊರಾಡುವ ನ್ಯಾಯವಾದಿಗಳಿಗೆ ರಕ್ಷಣೆ ಕೊಡಬೇಕಾಗಿರುವದು ಸರಕಾರದ ಅಧ್ಯ ಕರ್ತವ್ಯ ಆಗಿರುತ್ತದೆ. ಆದ್ದುದರಿಂದ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ಇತ್ತೀಚಿನ ದಿನಗಳ ಅತ್ಯಾವಶ್ಯಕ ವಾಗಿರುತ್ತದೆ. ವಕೀಲರ ಕಾಯ್ದೆಯ ಕರಡು ಪ್ರತಿ ಸಿದ್ಧವಿದ್ದು ಸದರಿ ಕರಡು ಪತಿಯನ್ನು ಪ್ರಸ್ತುತ ಚಳಿಗಾಲದ ಆವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಅನುಮೊದನೆ ಪಡೆದುಕೊಂಡು ಕಾನೂನನ್ನು ಜಾರಿಗೆ ತರುವಂತೆ ವಿನಂತಿಸಿದ್ದಾರೆ.

promotions

ವಕೀಲರ ರಕ್ಷಣಾ ಕಾಯ್ದೆಯನ್ನು ತರಲು ಕ್ರಮಗಳನ್ನು ಕೈಗೊಳ್ಳುವದಾಗಿ ಆಶ್ವಾಶನ ನೀಡಿದ್ದು, ಸದರಿ ಆಶ್ವಾಶನೆಯನ್ನು ವಿಳಂಬ ವಿಲ್ಲದ ಕಾರ್ಯರೂಪಕ್ಕೆ ತಂದಲ್ಲಿ ನ್ಯಾಯವಾದಿಗಳು ನಿರ್ಭಯವಾಗಿ ತಮ್ಮ ವೃತ್ತಿ ಜೀವನವನ್ನು ನಡೆಸಲು ಅನವು ಮಾಡಿಕೊಡಬೇಕೆಂದು ಕೋರಿದ್ದಾರೆ.

Read More Articles