ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಮಾಜಿ ಸಚಿವ ವಿನಯ ಕುಲ್ಕರ್ಣಿ

ಬೆಳಗಾವಿ :ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಭಂದ ಹೇರಿದ ಹಿನ್ನೆಲೆ ಮಾಜಿ‌ ಸಚಿವ ವಿನಯ ಕುಲಕರ್ಣಿ ಕಣ್ಣೀರು ಹಾಕಿದರು.

promotions

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ರಾಜಕಾರಣಿ ಅನ್ನೊದಕ್ಕಿಂತ ನಾನೊಬ್ಬ ರೈತ. ನನ್ನ ಪಾರ್ಮ್ ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಗಿಂತ ಹೆಚ್ಚಾಗಿ ಅವುಗಳನ್ನು ಸಾಕಿದ್ದೇನೆ. ಪ್ರತಿ ದಿನ ನಾನು ಬೆಳಗ್ಗೆ ಐದು ಗಂಟೆಗೆ ಪಾರ್ಮ್ ಗೆ ಹೋಗುತ್ತಿದ್ದೆ ಎಂದರು.

promotions

ಬೆಂಗಳೂರಿಗೆ ಹೋದಾಗ ಮಾತ್ರ ಹೋಗುತ್ತಿರಲಿಲ್ಲಾ, ಕ್ಷೇತ್ರದಲ್ಲಿ ಇದ್ದಾಗ ಮಾತ್ರ ಪಾರ್ಮ್ ಗೆ ಹೋಗದೆ ಇರುತ್ತಿರಲಿಲ್ಲ. ಇಷ್ಟು ದಿನ ಹೋಗದೆ ಇರುವುದು ತುಂಭಾ ನೂವು ತಂದಿದೆ. ನಾನೇನು ಟೇರೆರಿಸ್ಟಾ ರಾಜ್ಯ ಮತ್ತು ಜಿಲ್ಲೆಯಿಂದ ಬಹಿಸ್ಕಾರ ಹಾಕೋಕೆ. ಜಾನುವಾರುಗಳನ್ನು ನನ್ನ 22 ವರ್ಷದ ಮಗಳು ನೋಡಿಕೊಳ್ಳುತ್ತಿದ್ದಾಳೆ ಎಂದು ಭಾವುಕರಾದರು.

ಎರಡು ಮೂರುವ ಹಸುಗಳನ್ನು ಕಟ್ಟಿದ ರೈತರೆ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ. ಅಂತದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ರೆ ಮುಖಪ್ರಾಣಿಗಳ ಕಥೆ ಏನು. ಜಾನುವಾರುಗಳ ನೆನೆದು ಬಾವುಕರಾದ ವಿನಯ್ ಕುಲಕರ್ಣಿ.ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೆನೆ.ಕಾನೂನು ಹೋರಾಟ ಮುಂದು ಒರೆಸಿದ್ದೆನೆ ಎಂದರು.

ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುತ್ತಾರೆ ಅನ್ನುವ ವಿಶ್ವಾಸ ವಿದೆ. ಮುಂಬರು ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಕ್ಷೇತ್ರ ಬಲಲುಸುವ ಪ್ತಶ್ನೆಯೇ ಇಲ್ಲಾ. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೆನೆ ಎಂದರು.

Read More Articles