ನಿಪ್ಪಾಣಿಯಲ್ಲಿ ಚಿನ್ನಾಭರಣ ಕದ್ದ ನಾಲ್ವರ ಬಂಧನ

ಬೆಳಗಾವಿ: ನಿಪ್ಪಾಣಿ ತಾಲೂಕಿನಲ್ಲಿ ಚಿನ್ನಾಭರಣದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯ ಕಡೆಯಿಂದ ಡಕಾಯಿತಿ ಮಾಡಿದವರ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದರು.

promotions

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಕಾಯತಿ ಪ್ರಕರಣ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ನಡೆಸಿದ್ದ ಪೊಲೀಸ್ ಹಿರಿಯ ಅಧಿಕಾರಿ ಶಿವಯೋಗಿ ಹಾಗೂ ಅವರ ತಂಡದಿಂದ ತನಿಖೆ ನಡೆಸಿ ಡಕಾಯಿತಿ ಆದ 75 ಗ್ರಾಂ ಚಿನ್ನ, ಎರಡೂವರೆ ಕೆಜಿ ಬೆಳ್ಳಿಯನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಬೈಕ್ ಹಾಗೂ ಮೊಬೈಲ್ ಪತ್ತೆ ಮಾಡಲಾಗಿದೆ. ಇದರಲ್ಲಿ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೂರುದಾರನ್ನು ಆರೋಪಿತರು ಆತನನ್ನು ಹಿಂಬಾಲಿಸುತ್ತಿರುತ್ತಾರೆ.

promotions

Read More Articles