ಜನೆವರಿ 18 ರಿಂದ 22ರ ವರೆಗೆ ಹುಟ್ಟುವ ಮಕ್ಕಳಿಗೆ ಉಚಿತ ಹೆರಿಗೆ : ಬಸವನಗೌಡ ಯತ್ನಾಳ

ವಿಜಯಪುರ :ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ರಾಮ ಹಾಗೂ ಸೀತೆಯ ಜನ್ಮದಿನಾಚರಣೆಯ ಪ್ರಯುಕ್ತ, 18 ಜನೆವರಿ ಯಿಂದ  ಜನೆವರಿ 22ರವರೆಗೆ ಹುಟ್ಟುವ ಎಲ್ಲಾ ಮಕ್ಕಳಿಗೆ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುವುದು ಎಂದು ಬಸವನ ಗೌಡ ಯತ್ನಾಳ ತಿಳಿಸಿದರು.

promotions

ರಾಮ ಮತ್ತು ಸೀತೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖವಾದ ವ್ಯಕ್ತಿಗಳಾಗಿದ್ದಾರೆ. ಅವರ ಜನ್ಮದಿನಾಚರಣೆಯನ್ನು ಗೌರವಿಸುವ ಸಲುವಾಗಿ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಅವಧಿಯಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಎಲ್ಲಾ ಮಕ್ಕಳನ್ನು ರಾಮ ಮತ್ತು ಸೀತೆಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅವರ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುವುದು ಎಂದು ಯತ್ನಾಳ ಹೇಳಿದ್ದಾರೆ.

promotions

Read More Articles