1000 ಭಕ್ತರಿಗೆ ಪೂಜಾಗೆ ಕುಳಿತುಕೊಳ್ಳಲು ಉಚಿತವಾಗಿ ಪ್ರವೇಶ ರವಿವಾರ ಸಂಜೆ ಒಳಗಾಗಿ ಹೆಸರು ನೊಂದನೆ ಮಾಡಿಸಬೇಕು : ಶಂಕ್ರಯ್ಯ ಶಾಸ್ತ್ರಿಗಳು.
- 13 Jan 2024 , 11:58 PM
- Belagavi
- 263
ಶ್ರೀ ಸಿದ್ದಿ ವಿನಾಯಕ ಗುರುಕುಲ ಮತ್ತು ವನಸ್ಪತಿ ಸಂಶೋಧನಾ ಕೇಂದ್ರದಿಂದ ಲೋಕ ಕಲ್ಯಾಣಾರ್ಥವಾಗಿ ಸರ್ವ ದುಷ್ಠಾರಿಷ್ಠ ದೋಷ ನಿವಾರಣೆಗಾಗಿ ಗಣಹೋಮ, ಮೃತ್ಯುಂಜಯ ಹೋಮದೊಂದಿಗೆ ಸಹಸ್ರ ಲಿಂಗಾರ್ಚನೆ ಸಹಿತ ಲಕ್ಷ ಬಿಲ್ವಾರ್ಚನೆ ಹಾಗೂ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮವನ್ನು ಸೋಮವಾರ ನಗರದ ಬಿ.ಕೇ.ಕಂಗ್ರಾಳಿಯ ಗ್ರಾಮದ ಕಂಗ್ರಾಳಿಯ ಕಲ್ಮೇಶ್ವರ ನಗರದಲ್ಲಿ ನಡೆಸಲಾಗುವುದು ಎಂದು ಕೆ.ಎಲ್.ಇ ಯ ಶ್ರೀ ಶಂಕ್ರಯ್ಯ ಶಾಸ್ತ್ರೀಗಳು ಹಿರೇಮಠ ಅವರು ಇಂದು ನಗರದ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಶ್ರೀ ಶ್ರೀಶೈಲ್ ಪೂಜೇರಿ ಸ್ವಾಮಿಗಳು. ಹೆಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.











