ಅಕ್ಟೋಬರ್ 4ಕ್ಕೆ ಉಚಿತ ಯೋಗ ತರಬೇತಿ ಎಲ್ಲರೂ ಇದರ ಲಾಭ ಪಡೆಯಿರಿ
- Shivaraj Bandigi
- 14 Jan 2024 , 10:25 PM
- Belagavi
- 219
ಬೆಳಗಾವಿ : ನವರಾತ್ರಿ ಹಬ್ಬದ ಅಂಗವಾಗಿ ಸಂಸ್ಕಾರ ಸಂಘಟನೆ ಸೇವಾ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಎಸ್ ಪಿವೈ ಎಸ್ ಎಸ್ ಬೆಳಗಾವಿ ಶಾಖೆ ವತಿಯಿಂದ ಅ. 4 ರಂದು ಉಚಿತ ಯೋಗಾ ಧ್ಯಾನ ಪ್ರಾಣಾಯಾಮ ಕಲಿಸಿಕೊಡಲಾಗುವುದು.

ಇಲ್ಲಿನ ಮಹಾಂತೇಶ ನಗರದ ಹಾಗೂ ಪೊಲೀಸ್ ಹೆಡ್ ಕ್ವಾರ್ಟರ್ಸ್ ನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತ್ಯೇಕವಾಗಿ ಅ.4 ರಂದು ಬುಧವಾರ ಸಂಜೆ 4.30ರಿಂದ 6ರವರೆಗೆ ಉಚಿತವಾಗಿ ದುರ್ಗಾ ನಮಸ್ಕಾರ, ಯೋಗ ಧ್ಯಾನ ಪ್ರಾಣಾಯಾಮ ಕಲಿಸಿಕೊಡಲಾಗುವುದು. ನಗರದ ಜನತೆ ಇದರ ಲಾಭವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9481745874 ಹಾಗೂ 9945388701ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.











