ನಾಡಹಬ್ಬಕ್ಕಾಗಿ ದೇಶಿಯ ಉಡುಗೆ ಧರಿಸಿ, ವಿದೇಶದಲ್ಲಿ ದೇಶಿಯ ಸಂಸ್ಕೃತಿ ಪಸರಿಸುತ್ತಿರುವ ಸ್ನೇಹಿತರು
- shivaraj B
- 4 Oct 2024 , 9:20 PM
- Bailhongal
- 515
ಬೈಲಹೊಂಗಲ : ನಾಡಹಬ್ಬ ದಸರಾ ನಿಮಿತ್ಯ ನವರಾತ್ರಿ ದಿನಗಳಂದು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ದೇಶಿಯ ಪರಂಪರೆಯನ್ನು ಪಾಲಿಸುತ್ತಿರುವದು ಭಾರತದ ಹೆಮ್ಮೆ.

ನವರಾತ್ರಿಯ ಎರಡನೇಯ ದಿನವಾದ ಇಂದು ಹಸಿರು ಬಣ್ಣದ ಉಡುಗೆ ಧರಿಸಿ ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ಅನಾವರಣ ಮಾಡುತ್ತಿರುವದು ಹೆಮ್ಮೆಯ ಸಂಗತಿ. ರಾಜ್ಯದ ನಾಡಹಬ್ಬ ನವರಾತ್ರಿಯ ದಿನದಂದು ವಿಡಿಯೋ ಕಾಲ ಮುಖೇನ ಜಪಾನ, ಆಸ್ಟ್ರೇಲಿಯಾ ಮೊದಲಾದ ದೇಶದಲ್ಲಿ ವಾಸಿಸುವ ಅನಿವಾಸಿಯರು ತಮ್ಮ ಸ್ನೇಹಿತರಿಗೆ ಶುಭಾಶಯಗಳನ್ನು ವಿನಿಮಯ ಮಾಡಿದ್ದು ವಿಶೇಷವಾಗಿತ್ತು.

ಕವಿತಾ, ಅನುರಾಧಾ, ಸುನೀಲ, ಕಿರಣ ಮತ್ತು ರವಿ ಭಾಗವಹಿಸಿದ್ದರು. ಅನಾನುಕೂಲದಿಂದ ಕೆಲವರು ವಿಡಿಯೋ ಸಂವಾದದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ವರದಿ : ರವಿಕಿರಣ್ ಯಾತಗೇರಿ










