ಬಿಜೆಪಿ ಜೆಡಿಎಸ್ ಮೈತ್ರಿಗೆ ನೋ ಎಂದಿದ್ದ ಜಿ ದೇವರಜೇ ಗೌಡ : ರಹಸ್ಯ ಪತ್ರ ಬಹಿರಂಗ ಪಡಿಸಿದ ಕಾಂಗ್ರೆಸ್
- krishna shinde
- 29 Apr 2024 , 12:12 PM
- Bengaluru
- 668
ಅದೇ ರೀತಿಯಲ್ಲಿ ಜೆ.ಡಿ.ಎಸ್ ಪಕ್ಷದ ಪ್ರಮುಖ ನಾಯಕರುಗಳು ಈಗಾಗಲೇ ಮೈತ್ರಿ ಪ್ರಕ್ರಿಯೆ ಮುಂದುವರೆದಿದೆ ಎಂಬ ಬಗ್ಗೆ ಅವರೇ ಹೇಳಿಕೆಯನ್ನು ಮಾದ್ಯಮದಲ್ಲಿ ಹೇಳಿಕೆ ನೀಡಿ ಬಿಂಬಿಸಿಕೊಂಡಿವೆ. ಆದರೆ ಬಹಳ ಗಂಭೀರವಾದ ವಿಚಾರವೇನೆಂದರೆ ಭಾರತೀಯ ಜನತಾ ಪಕ್ಷ ವಿಶ್ವದಲ್ಲಿಯೇ ಪ್ರಥಮ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಹಾಗೂ ರಾಷ್ಟ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿ.ಜೆ.ಪಿ ಪಕ್ಷವು ಸತ್ಯ ಧರ್ಮ ಹಾಗೂ ಸಂಸ್ಕೃತಿ ಮತ್ತು ಸ್ತ್ರೀ ಕುಲವನ್ನು ಪೂಜ್ಯ ಭಾವನೆಯಿಂದ ನೋಡಿ ದೇಶದ ಮಹಿಳೆಯರ ಹೃದಯದಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ. ಆದರೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆ.ಡಿ.ಎಸ್ ಪಕ್ಷದ ಹಾಸನದ ಪ್ರಮುಖ ನಾಯಕರಾದ ಹೆಚ್.ಡಿ ರೇವಣ್ಣನವರ ಕುಟುಂಬದ ಸದಸ್ಯರುಗಳು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಸಹಿತ ಅಪಹರಣ ಹಲ್ಲೆ , ವಂಚನೆ ಮುಂತಾದ ಕೃತ್ಯಗಳೊಂದಿಗೆ ಇಡೀ ಸಮಾಜ ತಲೆ ತಗ್ಗಿಸುವ ಕೆಲಸ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಬಹಳ ಗಂಭೀರವಾದ ವಿಚಾರವೆಂದರೆ ಪೆನ್ ಡ್ರೈವ್ ಈ ಎಲ್ಲಾ ವೀಡಿಯೋ ಮತ್ತು ದಾಖಲೆಗಳು ಈಗಾಗಲೇ ಕಾಂಗ್ರೇಸ್‌ನ ರಾಷ್ಟ್ರೀಯ ನಾಯಕರ ಕೈ ಸೇರಿದೆ ಈ ಎಲ್ಲಾ ವೀಡಿಯೋಗಳನ್ನು ಹಾಸನದಲ್ಲಿ ಜೆ.ಡಿ.ಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆ.ಡಿ.ಎಸ್ ಪಕ್ಷದ ಅರ್ಭಯರ್ಥಿಯನ್ನು ಕಣಕ್ಕಿಳಿಸಿದರೆ ಇದನ್ನೇ ಭ್ರಷ್ಟಾಸ್ತ್ರವಾಗಿ ಉಪಯೋಗಿಸಿಕೊಂಡು ಅತ್ಯಾಚಾರಿ ಪಕ್ಷದ ಕುಟುಂಬದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷ ಎಂಬ ಕಳಂಕ ಶಾಶ್ವತವಾಗಿ ನಮ್ಮ ಪಕ್ಷಕ್ಕೆ ಬರುವುದು ಸತ್ಯ ಎಂದು ಹೇಳಿದ್ದರು. ಇದರಿಂದ ರಾಷ್ಟ್ರದಲ್ಲಿ ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಪೆಟ್ಟು ಬೀಳುವುದು ಹಾಗೂ ಪಕ್ಷದ ವರ್ಚಸ್ಸಿಗೆ ಅಗೌರವ ಬರುವುದು ಸತ್ಯ ಎಂದು ಹೇಳಿದ್ದಾರೆ.
ಕೂಡಲೇ ಈ ಪತ್ರದ ಬಗ್ಗೆ ತಾತ್ಸರ ತೋರದೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಹಾಸನ ಜಿಲ್ಲೆಯಲ್ಲಿ ಹೆಚ್.ಡಿ ರೇವಣ್ಣನವರ ಕುಟುಂಬದ ಸದಸ್ಯರುಗಳ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಅವರ ಗಮನ ಸೆಳೆಯಬೇಕಾಗಿ ಮನವಿ ಮಾಡುತ್ತೇನೆ ಎಂದು ದೇವರಜೇ ಗೌಡಾ ಕೋರಿದ್ದರು.











