ರಮೇಶ ಜಾರಕಿಹೊಳಿ ಮಾದರಿಯಲ್ಲಿ ಮುರುಘಾ ಶರಣರ ತನಿಖೆ ನಡೆಸುವಂತೆ ಗಡಾದ ಒತ್ತಾಯ
- 5 Jan 2024 , 10:27 PM
- Belagavi
- 138
ಬೆಳಗಾವಿ: ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣವನ್ಮು ಮಾಜಿ ಸಚಿವ ರಮೇಧ ಜಾರಕಿಹೊಳಿ ತನಿಖಾ ಮಾನದಂಡವನ್ನೇ ಅನುಸರಿಸಿರಿ. ತನಿಖಾ ತಂಡ (ಎಸ್.ಐ.ಟಿ) ರಚಿಸಿ ತನಿಖೆ ನಡೆಸಬೇಕೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಮೇಲಿನ cola ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾಗಿದ್ದ ರಮೇಶ ಜಾರಕಿಹೊಳಿಯವರ ರಾಸಲೀಲೆಯ ಸಿ.ಡಿ ಪ್ರಕರಣದ ತನಿಖೆ ನಡೆಸಿರುವ ಮಾದರಿಯಲ್ಲಿಯೇ ಈ ಪ್ರಕರಣದ ತನಿಖೆ ನಡೆಸಲು ಮತ್ತು ಜಾರಕಿಹೊಳಿ ಪ್ರಕರಣಕ್ಕೆ ಅನುಸರಿಸಲಾದ ಮಾನದಂಡಗಳನ್ನೇ ಮುರುಘಾ ಶರಣರ ಪ್ರಕಣಕ್ಕೂ ಅನ್ವಯಿಸುವಂತೆ ಸರಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ "ರಾಜಕಾರಣಿಗಳಿಗೊಂದು ಕಾನೂನು' ಜನಮಾನ್ಯರಿಗೊಂದು ಕಾನೂನು ಎಂಬಂತೆ ನಡೆದುಕೊಳ್ಳುತ್ತಿರುವ ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಬೇಕಾಗುವುದು ಎಂದು ಪತ್ರದಲ್ಲಿ ಎಚ್ಚರಕೆ ನೀಡಿದ್ದಾರೆ.











