ಅಪ್ಪಟ ಕನ್ನಡದ ಅಪರ್ಣಾ ಇನ್ನಿಲ್ಲ

ಬೈಲಹೊಂಗಲ : ಅಪ್ಪಟ ಕನ್ನಡದ ನಿರೂಪಕಿ ಅಪರ್ಣಾ ತನ್ನ 51 ನೇಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. 

promotions

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಅಚ್ಚ ಕನ್ನಡದ ತನ್ನ ನುಡಿಯಿಂದ ಜನಪ್ರಿಯತೆ ಗಳಿಸಿದ ಅಪರ್ಣಾ 1984 ರಲ್ಲಿ ಪುಟ್ಟಣ್ಣ ಕಣಗಾಲ ಅವರ ಮಸನದ ಹೂವು ಚಿತ್ರದಿಂದ ಸಿನಿ ಜಗತ್ತು ಪ್ರವೇಶಿಸಿದರು. ಇನಸ್ಪೆಕ್ಟರ್ ವಿಕ್ರಮ ಮೊದಲಾದ ಕನ್ನಡ ಚಿತ್ರದಲ್ಲಿ ನಟಿಸಿ ಕನ್ನಡತನ ಉಳಿಯಲು ತಮ್ಮದೆ ಆದ ಕೊಡುಗೆ ನೀಡಿದ ಅವರು ಇಂದು ನಮ್ಮೊಂದಿಗೆ ಇಲ್ಲ. ಮಾರಕ ಕ್ಯಾನ್ಸರ್ ಖಾಯಿಲಿಗೆ ತುತ್ತಾಗಿ ತಮ್ಮ ಸಿನಿಪಯಣ ಮುಗಿಸಿದ್ದಾರೆ. 

promotions

90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿ ಬಂದ ಹಲವಾರು ಕಾರ್ಯಕ್ರಮಗಳಿಗೆ ಕನ್ನಡದ ದ್ವನಿಯಾಗಿ ಅಚ್ಚುಕಟ್ಟಾಗಿ ನಿರೂಪಣೆ ನೀಡಿದ ಅಪರ್ಣಾ, ಭಾರತ ಸರ್ಕಾರದ ವಿವಿಧ ಭಾರತಿ ರೇಡಿಯೋದಲ್ಲಿ ಜಾಕಿಯಾಗಿ ಕೂಡಾ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ. ಸನ್ 1998 ರ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ನಿರಂತರವಾಗಿ 8 ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ನಿರ್ಮಿಸಿದ್ದರು.

promotions

ಕಿರುತೆರೆಯ ಮೂಡಲಮನೆ, ಮುಕ್ತ ಮುಕ್ತ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಇವರು 2013ರಲ್ಲಿ ನಡೆದ ಕನ್ನಡದ ಬಿಗ್ ಬಾಸ್ ಮೊದಲ ಸೀಸನದಲ್ಲಿಯೂ ಕೂಡಾ ಭಾಗವಹಿಸಿದ್ದರು. 

2014 ರಲ್ಲಿ ಆರಂಭವಾದ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಘೋಷಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಒಟ್ಟಾರೆ ಅಪ್ಪಟ ಕನ್ನಡದ ಅಪರ್ಣಾ ಇನ್ನಿಲ್ಲ ಎನ್ನುವದು ಮಾತ್ರ ಕನ್ನಡಿಗರು ಬೇಸರ ಪಡುವ ವಿಷಯ.

ವರದಿ : ರವಿಕಿರಣ್   ಯಾತಗೇರಿ

Read More Articles