ಕಾನಿಪ ಧ್ವನಿ ಸಂಘಟನೆಗೆ ಎರಡನೇ ಬಾರಿಗೆ ಸಾಕ್ಷಿ ವರದಿಗಾರ ಗಿರಿ ಯಾದವ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ : ಬಂಗ್ಲೆ ಮಲ್ಲಿಕಾರ್ಜುನ

ಬಳ್ಳಾರಿ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಇಂದು ನಡೆದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎರಡನೇ ಬಾರಿಗೆ ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ಸಾಕ್ಷಿ ತೆಲುಗು ದಿನಪತ್ರಿಕೆ ವರದಿಗಾರ ಗಿರಿ ಯಾದವ್ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. 

promotions

 ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ. ಜಿಲ್ಲಾ ಗೌರವ ಅಧ್ಯಕ್ಷರನ್ನಾಗಿ ಟಿ ದುರ್ಗಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಗಿರಿ ಯಾದವ್, ಉಪಾಧ್ಯಕ್ಷರಾಗಿ ಭೀಮಣ್ಣ, ಕಂಪ್ಲಿ ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎರಗುಡಿ ರಮೇಶ್, ಮತ್ತು ಖಾಜಾಂಚಿಯಾಗಿ ಪ್ರಭಾಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಇಳಿಸಿದ್ದಾರೆ. 

promotions

ಮತ್ತು ಕಾನೂನು ಸಲಹೆಗಾರನ್ನಾಗಿ ವಕೀಲರಾದ ಜಾಲಿಹಾಳ ಕೆ.ಗವಿಸಿದ್ದಪ್ಪ, ಮತ್ತು ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಸಿರುಗುಪ್ಪ ಮಲ್ಲಿಕಾರ್ಜುನ ಕಸ್ತೂರಿ, ಗಡಿ ಭಾಗದ ಮರಿಸ್ವಾಮಿ ಅವರನ್ನು ಆಯ್ಕೆಯಾಗಿದ್ದಾರೆ.

ಕಳೆದ ಆರು ತಿಂಗಳಿಂದ ಜಿಲ್ಲಾಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುರಿತು ಗೊಂದಲ ಸೃಷ್ಟಿಯಾಗಿತ್ತು ಇದನ್ನು ಬಳ್ಳಾರಿ ನಗರದ ನೂತನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ರಾಜ್ಯದ್ಯಕ್ಷರಾದ  ಬಂಗ್ಲೆ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಸಭೆಯನ್ನು ನಡೆಸಿ ಜಿಲ್ಲೆಯ ಎಲ್ಲಾ ತಾಲೂಕು ಘಟಕದ ಪದಾಧಿಕಾರಿಗಳನ್ನು ಕರೆಸಿ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಘಟಕ ಮತ್ತು ತಾಲೂಕು ಅಧ್ಯಕ್ಷರನ್ನು ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಮುಂಬರುವ ದಿನಗಳಲ್ಲಿ ಬಳ್ಳಾರಿಯಲ್ಲಿ ಇಡೀ ರಾಜ್ಯ ತಿರುಗಿ ನೋಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಮಟ್ಟದ ಒಂದು ದೊಡ್ದ ಸಮ್ಮೇಳನ ಆಗಬೇಕೆಂದು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗಳೂರು ಲಕ್ಷ್ಮಣರಾವ್ ಅವರು ನೂತನವಾಗಿ ಆಯ್ಕೆಯಾದ ಜಿಲ್ಲಾ ಘಟಕಕ್ಕೆ ಆದೇಶ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಿಂಗಾಪುರ ನಾಗರಾಜ್, ಸೇರಿದಂತೆ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರುಗಳು, ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವರದಿ : ರವಿಚಂದ್ರ ಬಡಿಗೇರ 

Read More Articles