ಕಾರ್ಮಿಕರಿಗೆ ಶುಭಸುದ್ದಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯಧನ
- shivaraj bandigi
- 17 May 2024 , 5:48 PM
- Bengaluru
- 1057
ಬೆಂಗಳೂರು: ಕಾರ್ಮಿಕ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯಧನ ಕಾರ್ಯಕ್ರಮವನ್ನು ಪರಿಚಯಿಸಿದೆ. ಮಾಸಿಕ ಪಿಂಚಣಿ, ಮಗುವಿಗೆ ಜನ್ಮ ನೀಡುವ ಮಹಿಳಾ ಫಲಾನುಭವಿಗಳಿಗೆ ವಿಶೇಷ ಸಹಾಯಧನ, ಮಗುವಿನ ಶಾಲಾಪೂರ್ವ ಶಿಕ್ಷಣ ಮತ್ತು ಪೋಷಣೆಗೆ ಸಹಾಯಧನ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದೆ ಅದಕ್ಕೆ ಸಂಬಂಧಿಸಿದಂತೆ ಈ ಯೋಜನೆಯನ್ನು ಪಡೆಯಲು ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು, ಮಗುವಿನ ಜನನದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು, ಮೂರು ವರ್ಷಗಳವರೆಗೆ ಸಬ್ಸಿಡಿ ಪಡೆಯಲು ಪ್ರತಿ ವರ್ಷ ಪುನಃ ಅರ್ಜಿ ಸಲ್ಲಿಸಬೇಕು, ಈ ಪ್ರಯೋಜನವು ನೋಂದಾಯಿತ ಕಾರ್ಮಿಕರ ಮೊದಲ ಎರಡು ಮಕ್ಕಳಿಗೆ ಮಾತ್ರ ಲಭ್ಯವಿರುತ್ತದೆ ಎಂದು ತಿಳಿಸಲಾಗಿದ್ದು. ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವುದು. ಕೆಲಸ ಮಾಡುವ ತಾಯಂದಿರಿಗೆ ಬೆಂಬಲ ನೀಡುವುದು. ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಗಳ ಯೋಗಕ್ಷೇಮವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ ಆದ್ದರಿಂದ ಎಲ್ಲ ಅರ್ಹ ಕಾರ್ಮಿಕರನ್ನು ಈ ಯೋಜನೆಯ ಲಾಭ ಪಡೆಯಬೇಕು.












