ತುಂಗಭದ್ರಾ ಕ್ರಸ್ಟ್ ಗೇಟ ದುರಂತ ಸರ್ಕಾರವೇ ಹೊಣೆ. ವಿಜಯೇಂದ್ರ
- shivaraj B
- 12 Aug 2024 , 4:02 PM
- Koppal
- 515
ಕೊಪ್ಪಳ : ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಪ್ರಕರಣಕ್ಕೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ತುಂಗಭದ್ರಾ ಡ್ಯಾಂ ರೈತರ ಜೀವನಾಡಿಯಾಗಿದೆ. ರಾಜ್ಯದ ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ಡಿಕೆ ಶಿವಕುಮಾರ್ ಅಧಿಕಾರಿಗಳನ್ನ ಹೊಣೆ ಮಾಡಲ್ಲ ಅಂತಾರೆ. ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕು ಎಂದರು.

ಸರ್ಕಾರ ಚೀಫ್ ಇಂಜಿನಿಯರ್ ನೇಮಕ ಮಾಡಿಲ್ಲ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಜ್ಞರು ನೀಡಿದ ಯೋಜನೆ ಅನುಷ್ಠಾನ ಮಾಡಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಈ ಘಟನೆ ಸಂಭವಿಸಿದೆ. ಪ್ರತಿ ಹೆಕ್ಟರ್ ಗೆ ತಲಾ 50,000 ನೀಡಬೇಕು. ತುಂಗಭದ್ರ ಡ್ಯಾಮ್ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿಯಾಗಿದೆ. ಕಳೆದ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದರು. ಈ ಬಾರಿ ಎರಡು ಬೆಳೆ ಬೆಳೆಯಬಹುದು ಅಂತ ರೈತರು ಸಂತಸದಿಂದ ಇದ್ದರು. ಆದರೆ ಈಗ ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿಕೊಂಡು ಹೋಗಿದ್ದು, ಇದರಿಂದ ಈ ಭಾಗದ ರೈತರಿಗೆ ಆಘಾತ ಉಂಟಾಗಿದೆ ಎಂದರು.










