ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಸರ್ಕಾರ ಶ್ರಮಿಸುತ್ತಿದೆ: ಬಸವರಾಜ ಹೆಗ್ಗನಾಯಕ
- shivaraj B
- 3 Sep 2024 , 8:59 PM
- Belagavi
- 269
ಬೆಳಗಾವಿ: ಗ್ರಾಮೀಣ ಮಹಿಳಾ ಒಕ್ಕೂಟಗಳ ಸದಸ್ಯರ ಸಾಮರ್ಥ್ಯ ಬಲವರ್ಧನೆ ಮತ್ತು ದಾಖಲಾತಿ ನಿರ್ವಹಣೆಗಾಗಿ ಮತ್ತು ಸಂಜೀವಿನಿ ಯೋಜನೆಯಡಿ ಸರ್ಕಾರ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಸರ್ಕಾರದ ಸಂಜೀವಿನಿ ಶಾಖೆ ಮತ್ತು ಜಿಲ್ಲಾ ಪಂಚಾಯತ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಮಚ್ಛೆಯ ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ (ಸೆ.03) ಆಯೋಜಿಸಲಾದ ಹುಕ್ಕೇರಿ ತಾಲ್ಲೂಕಿನ ಎನ್.ಆರ್.ಎಲ್.ಎಮ್ ಸಂಜೀವಿನಿ ಯೋಜನೆಯ ಎಮ್.ಬಿ.ಕೆ ಗಳಿಗೆ ವಸತಿ ಸಹಿತ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿಯ ಮೂಲ ಉದ್ದೇಶ ಗ್ರಾಮೀಣ ಮಹಿಳಾ ಒಕ್ಕೂಟಗಳ ಸದಸ್ಯರ ಸಾಮರ್ಥ್ಯ ಬಲವರ್ಧನೆ ಮತ್ತು ದಾಖಲಾತಿಗಳ ನಿರ್ವಹಣೆ ಆಗಿದೆ. ಸಂಜೀವಿನಿ ಯೋಜನೆಯಡಿ ಸರ್ಕಾರ ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಸಾಕಷ್ಟು ಅನುದಾನ ನೀಡುತ್ತಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸದರಿ ತರಬೇತಿಯಲ್ಲಿ ವಿವಿಧ ಒಕ್ಕೂಟಗಳು ತಮ್ಮ ದಾಖಲಾತಿಗಳನ್ನು ಹೇಗೆ ವ್ಯವಸ್ಥಿತವಾಗಿ ನಿರ್ವಹಿಸಿ, ನೊಂದಣ ಮತ್ತು ನವೀಕರಣ ನೀಡಬೇಕು, ಲೆಕ್ಕ ಪರಿಶೋಧನೆ, ಹಾಗೂ ಸಮುದಾಯಿಕ ಸಂಸ್ಥೆಗಳ ಬಲವರ್ಧನೆ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ಎಲ್ಲಾ ತರಬೇತುದಾರರಿಗೆ ತಿಳಿಸಿದರು.
ಸಂಜೀವಿನಿ ಶಾಖೆ ಜಿಲ್ಲಾ ವ್ಯವಸ್ಥಾಪಕ ಮಾತನಾಡಿ ಸದರಿ ತರಬೇತಿಯ ಸರ್ಕಾರದ ಆಶಯದಂತೆ ಆಯೋಜಿಸಲಾಗಿದೆ. ಎಮ್‌ಬಿಕೆ ಗಳು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪೂನ್ಮೂಲ ಕೇಂದ್ರದ ಆಡಳಿತ ಸಹಾಯಕಿ, ಮಂಜುಳಾ ಹೊನಕುಪ್ಪಿ, ಲೆಕ್ಕ ಸಹಾಯಕಿ ಸೋನು ಮುತ್ನಾಳ, ರಾಜ್ಯ ಸಂಪನ್ಮೂಲ ವ್ಯಕ್ತಿ ಲಕ್ಷ್ಮಣಗೌಡ ಹಾಗೂ ಎಮ್‌ಬಿಕೆ ಗಳಾದ ಆರತಿ ಬಿರಂಜಿ, ದೀಪಾ ಮುರಕುಟ್ಟಿ, ಹರ್ಷಾ ಅಗಸರ, ಲತಾ ಪವಾರ, ಕಾವೇರಿ ಗಿರಿಮಲ್ಲನವರ, ಪೂರ್ಣಿಮಾ ಬಂಗಾರಿ, ಶಶಿಕಲಾ ಪೂಜಾರಿ, ಸವಿತಾ ಕುಂಬಾರ, ರೇಖಾ ಅಂಬಿಗೇರ, ರಮೇಶ ದೇಸಾಯಿ, ಶಾಂತಾರಾಮ,ಅಶ್ವಿನಿ ಸುರೇಶ ತಳವಾರ, ರೋಹಿಣ ಪಾಟೀಲ, ಎಮ್‌ಬಿಕೆ ಕೋಟ, ಪೂರ್ಣಿಮಾ ಜುಮ್ಮಾಯಿ, ಎಮ್‌ಬಿಕೆ ಪಾಶ್ಚಾಪೂರ ಉಪಸ್ಥಿತರಿದ್ದರು.