ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
- 14 Jan 2024 , 11:19 PM
- Jammu&Kashmir
- 227
ಜಮ್ಮು :ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಹಿಂದಿನ ಕಾರಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಬಹಳ ದಿನಗಳಿಂದ ಪಕ್ಷದ ನೀತಿಗಳಿಂದ ಕೋಪಗೊಂಡಿದ್ದ ಅವರು ಈಗಾಗಲೇ ಜಮ್ಮುವಿನ ಜವಾಬ್ದಾರಿ ನೀಡಿದ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ, ಗುಲಾಂ ನಬಿ ಆಜಾದ್ ಅವರು "ಅತ್ಯಂತ ವಿಷಾದ ಮತ್ತು ಭಾವನಾತ್ಮಕ ಹೃದಯದಿಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ ನನ್ನ ಅರ್ಧ ಶತಮಾನದ ಹಳೆಯ ಸಂಬಂಧವನ್ನು ಮುರಿಯಲು ನಿರ್ಧರಿಸಿದ್ದೇನೆ" ಎಂದು ಬರೆದಿದ್ದಾರೆ.











