ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಡಾ. ಕಳ್ಳಿಬಡ್ಡಿ ಅಧ್ಯಕ್ಷ
- shivaraj bandigi
- 19 Mar 2024 , 12:19 PM
- Belagavi
- 290
ಬೈಲಹೊಂಗಲ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಅವುಗಳ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕುವಾರು ಅನುಷ್ಠಾನ ಸಮಿತಿ ರಚಿಸಿದೆ.
ಬೈಲಹೊಂಗಲ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಹಿರಿಯ ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಳ್ಳಿಬಡ್ಡಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಜಿಲ್ಲಾ ಸಮಿತಿಗೂ ಸಹ ಸದಸ್ಯರನ್ನಾಗಿ ನಿಯುಕ್ತಿ ಗೊಳಿಸಲಾಗಿದೆ.

ತಾಲೂಕಾ ಸಮಿತಿಯಲ್ಲಿ 14 ಜನ ಸದಸ್ಯರಿದ್ದು ತಾಪಂ ಇಓ ಸದಸ್ಯ ಕಾರ್ಯದರ್ಶಿ ಇರುತ್ತಾರೆ.

ವರದಿ : ರವಿಕಿರಣ್ ಯಾತಗೇರಿ










