ಕಾಂಗ್ರೆಸ್ ಸರ್ಕಾರದಿಂದ ಗುಜರಿ ಬಸ್ ಗ್ಯಾರೆಂಟಿ: ಆರ್ ಅಶೋಕ್

ಅನೇಕ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗುತ್ತಿದ್ದ ಕರ್ನಾಟಕದ ಹೆಮ್ಮೆಯ ಸಾರಿಗೆ ನಿಗಮಗಳು ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಈಗ ನಗೆಪಾಟಲಿಗೆ ಈಡಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ವಸ್ತುವಾಗಿದೆ.

promotions

7 ಲಕ್ಷ ಕಿಲೋ ಮೀಟರ್ ಪೂರ್ಣಗೊಳಿಸಿರುವ ಬಸ್ಗಳನ್ನು ಬದಲಾಯಿಸಬೇಕು ಎಂಬ ನಿಯಮವಿದ್ದರೂ, ಹೊಸ ಬಸ್ಸು ಖರೀದಿಗೆ ಹಣವಿಲ್ಲದೆ ಗುಜರಿ ಬಸ್ ಗಳನ್ನೇ ಓಡಿಸುತ್ತಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ.

promotions

ಪದೇ ಪದೇ ದುರಸ್ಥಿಯಾಗುವ ಗುಜರಿ ಬಸ್ಸುಗಳಿಂದ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿ ಸ್ತ್ರೀಯರು ದಿನನಿತ್ಯ

ಪರದಾಡುವ ಪರಿಸ್ಥಿತಿ ತಲೆದೋರಿದ್ದು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.

Read More Articles