ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಕಡ್ಡಾಯ :ಮದ್ರಾಸ್ ಹೈಕೋರ್ಟ್
- 14 Jan 2024 , 11:02 PM
- Tamilnadu
- 179
ತಮಿಳುನಾಡು :ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶಿಸಿದೆ.

ಡಾ.ಅಂಬೇಡ್ಕರ್ ಅವರು ಭಾರತೀಯ ಸಂವಿಧಾನ ಶಿಲ್ಪಿ. ಅವರು ಸಾಮಾಜಿಕ ವಿಮೋಚನೆಯ ಸಂಕೇತ. ಅವರ ಪಾಂಡಿತ್ಯ ಅಪ್ರತಿಮವಾಗಿದೆ. ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಗೆ ಅವರು ಅತ್ಯುತ್ತಮ ಸ್ಫೂರ್ತಿಯಾಗಬಹುದು. ತಮಿಳುನಾಡಿನ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸುವಂತೆ ಚೆನ್ನೈನ ಕಾನೂನು ಅಧ್ಯಯನ ನಿರ್ದೇಶಕರಿಗೆ ಮನವಿ ಮಾಡಲಾಗಿದೆ ಎಂದು ಕೋರ್ಟ್ ಆದೇಶಿಸಿದೆ.











