ನಾಡಿನೆಲ್ಲೆಡೆ ಇಂದು ಹನುಮ ಜಯಂತಿ ಆಚರಣೆ

ಬೆಳಗಾವಿ: ನಾಡಿನೆಲ್ಲೆಡೆ ಮಂಗಳವಾರ ಹನುಮಾನ್ ಜಯಂತಿಯನ್ನು ಅತ್ಯಂತ ಶೃಧ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಅದರಂತೆ ನಗರದಲ್ಲಿಯೂ ಸಹ ವಿವಿಧ ದೇವಸ್ಥಾನಗಳಲ್ಲಿ ಹನುಮ ಜಯಂತಿಯನ್ನು ಶೃದ್ಧಾ, ಭಕ್ತಿಯಿಂದ ಆಚರಿಸಲು ಸಿದ್ಧರಾಗಿದ್ದಾರೆ. ನಗರದ ವಿವಿಧ ಹನುಮಾನ್ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ವಿಶೇಷವಾಗಿ ಅಲಂಕರಿಸಿದ ಹನುಮಾನ್ ಮೂರ್ತಿಗೆ ನಮಿಸಿ ಮಹಿಳೆಯರು, ಪುರುಷರು, ಯುವಕರು, ವೃದ್ಧರು ಸೇರಿದಂತೆ ಜಾತಿ, ಮತ, ಪಂಥಗಳನ್ನು ಮೀರಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ವತಿಯಿಂದ ಮಹಾಪ್ರಸಾದವನ್ನೂ ಸಹ ಆಯೋಜಿಸಲಾಗಿದ್ದು ಭಕ್ತರು ಪುಣಿತರಾಗುತ್ತಿದ್ದಾರೆ.

promotions

promotions

Read More Articles