ಕಿರುಕಳ ಆರೋಪ : ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ

ಕಾಗವಾಡ :ಕಿರುಕಳ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ, ಶಾಸಕರ‌ ಕಿರುಕಳದಿಂದ ಅವರ ಮನೆ ಮುಂದೆ ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಹೇಳಿದ್ದ ಬಿಜೆಪಿ ಕಾರ್ಯಕರ್ತ ರಾಮನಗೌಡ ಪಾಟೀಲ ಅವರ ಬಗ್ಗೆ ಕಾಗೆ ಮಾತನಾಡಿದ್ದಾರೆ.

promotions

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ರಾಮನಗೌಡ ಅವರು ನನ್ನ ಸ್ನೇಹಿತ ಇದ್ದರು ಆದರೆ ಯಾವ ಕಾರಣಕ್ಕೆ ಈ‌ ರೀತಿ ಹೇಳ್ತಾ ಇದ್ದಾರೆ ಗೊತ್ತಿಲ್ಲ ಎಂದು ಕಾಗೆ ಹೇಳಿದ್ದಾರೆ.

promotions

ಎನಾದರು ಪ್ರೂಫ್ ಇದ್ದರೆ ನನ್ನ ವಿರುದ್ಧ ಕ್ರಮ ತಗೆದುಕೊಳ್ಳಲಿ ಎಲ್ಲ ಕಾಮಗಾರಿ/ಅನುದಾನ ತಾತ್ಕಾಲಿಕ ನಿಲ್ಲಿಸಿ ಎಂದು ಸರ್ಕಾರವೇ ಆದೇಶ ಮಾಡಿದೆ ಅದನ್ನೆ ನಾನು ಅಧಿಕಾರಿಗಳಿಗೇ ತಿಳಿಸಿದ್ದೇನೆ ಎಂದು ಕಾಗೆ ಹೇಳಿದ್ದಾರೆ.

ಈತ‌ ನನಗೇ ಮಾನಸಿಕ‌ ತೊಂದರೆ ನೀಡುತ್ತಿದ್ದಾನೆ ನನ್ನ ಆರೋಗ್ಯ ಸರಿ ಇಲ್ಲ ಇವನು ಕರೆ ಮಾಡಿ ಮಾತನಾಡಿರೋ ಎಲ್ಲ ರೆಕಾರ್ಡ ಇದೆ ಇವನ‌ ವಿರುದ್ಧ ಪೋಲಿಸ್ ಕಂಪ್ಲೇಂಟ್ ನೀಡುವೆ 
ನನಗೆ ಈತನ ನಡೆಯಿಂದ ಏನಾದರು ಹೆಚ್ಚು ಕಡಿಮೆ‌ ಆದರೆ ಸರ್ಕಾರವೇ ನೇರ ಕಾರಣ ಎಂದು ಕಾಗೆ ಹೇಳಿದ್ದಾರೆ.

ದಾಖಲೆ‌ ಇಲ್ಲದೆ ಒಬ್ಬ ಶಾಸಕರ ವಿರುದ್ಧ ಈ ರೀತಿ ಹೇಳಿಕೆ ನಿಡೋದು ತಪ್ಪು ನನ್ನ ಹತ್ತಿರ ಅವನೇ ದುಡ್ಡು ತಗೆದುಕೊಂಡಿದ್ದಾನೆ ಅವನ ಹತ್ತಿರ ನಾನು ದುಡ್ಡು ತಗೆದುಕೊಂಡಿದ್ದೇನೆ ಅಂತ ದಾಖಲೆ‌ ಇದ್ದರೆ ತೋರಿಸಲು ಕಾಗೆ ಹೇಳಿದ್ದಾರೆ.

Read More Articles