ಇಸ್ರೇಲ್ ಮೇಲೆ ಇರಾನನಿಂದ 200ಕಿಂತ ಹೆಚ್ಚು ಕ್ಷಿಪಣಿಗಳ ಭಾರಿ ದಾಳಿ -ಐಡಿಎಫ್ ತೀವ್ರ ಪ್ರತೀಕಾರದ ಎಚ್ಚರ!
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇರಾನ್ ಇಸ್ರೇಲ್ ಮೇಲೆ 180ಕ್ಕಿಂತ ಹೆಚ್ಚು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಈ ದಾಳಿ ಇರಾನ್ ನಿಂದ ನೇರವಾಗಿ ಇಸ್ರೇಲ್ ನ ವಿವಿಧ ಭಾಗಗಳನ್ನು ಗುರಿಯಾಗಿಸಿತು. ಇಸ್ರೇಲ್ ನ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ ಕೆಲವು ಕ್ಷಿಪಣಿಗಳು ಬಿದ್ದರೂ, ಇಸ್ರೇಲ್ ಮತ್ತು ಅಮೇರಿಕಾ ನೇತೃತ್ವದ ರಕ್ಷಣಾ ಒಕ್ಕೂಟ ಹೆಚ್ಚಿನ ಕ್ಷಿಪಣಿಗಳನ್ನು ತಡೆಯುವಲ್ಲಿ ಯಶಸ್ವಿಯಾಯಿತು.

ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ, ಈ ದಾಳಿಯನ್ನು “ಗಂಭೀರ ಮತ್ತು ಅಪಾಯಕಾರಿ ಹೆಜ್ಜೆ” ಎಂದು ಬಣ್ಣಿಸಿದರು. ಇಸ್ರೇಲ್ ನ ರಕ್ಷಣಾ ಹಾಗೂ ಪ್ರತ್ಯಾಕ್ರಮಣ ಶಕ್ತಿಗಳು ಉನ್ನತ ಮಟ್ಟದಲ್ಲಿ ಸಜ್ಜಾಗಿವೆ ಎಂದು ಅವರು ತಿಳಿಸಿದರು.

ನಮ್ಮ ಕಾರ್ಯಚರಣಾ ಯೋಜನೆಗಳು ಸಂಪೂರ್ಣ ಸಿದ್ಧವಾಗಿವೆ. ಸರ್ಕಾರದ ನಿರ್ದೇಶನದಂತೆ, ನಾವು ಎಲ್ಲಿ, ಯಾವಾಗ, ಹೇಗೆ ಪ್ರತಿಸ್ಪಂದಿಸಬೇಕೆಂದು ತೀರ್ಮಾನಿಸುತ್ತೇವೆ, ಎಂದು ಹಗಾರಿ ಹೇಳಿದ್ದಾರೆ. ಇಸ್ರೇಲ್ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ ಎಂಬುದರ ಬಗ್ಗೆ ಅವರು ಭರವಸೆ ನೀಡಿದ್ದಾರೆ.
— Iran Military (@IRIran_Military) October 1, 2024And you threw not, when you threw, but it was Allah who threw (8:17) pic.twitter.com/V0adijcbfw
ಅಕ್ಟೋಬರ್ 7ರಿಂದ ಇರಾನ್ ಮತ್ತು ಅದರ ದತ್ತಪೋಷಕರು ಇಸ್ರೇಲ್ ವಿರುದ್ಧ ಮುಂಚಿನಲ್ಲಿಯೇ ಹಲವಾರು ದಾಳಿ ನಡೆಸುತ್ತಿದ್ದರೆ, ಈ ದಾಳಿ ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.










